Friday, November 22, 2024

ರಂಗೇರಿದ ಚನ್ನಪಟ್ಟಣ ಉಪಚುನಾವಣೆ: ಬಿ ಎಸ್ ಯಡಿಯೂರಪ್ಪ ಶಾಕಿಂಗ್ ಹೇಳಿಕೆ

ರಾಮನಗರ : ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರ ಮೈತ್ರಿ ಪಕ್ಷಗಳಿಗೆ ಕಗ್ಗಂಟಾಗಿದೆ. ಇತ್ತ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರನನ್ನು ಕಣಕ್ಕೆ ಇಳಿಸಲು ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿಯ ಎಂಎಲ್‌ಸಿ ಸಿಪಿ ಯೋಗೇಶ್ವರ್ ಅವರು ಟಿಕೆಟ್ ಪಡೆಯಲು ಹರಸಾಹಸಪಡುತ್ತಿದ್ದಾರೆ.ಈ ಮಧ್ಯೆ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಚನ್ನಪ್ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯೇ ನಿಲ್ಲೋದು ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿ ಎರಡು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಉಳಿದ ಚನ್ನಪಟ್ಟಣ ಯಾರಿಗೆ ಎಂಬ ಚರ್ಚೆ ಮುಂದುವರಿದಿದೆ. ಇದಕ್ಕೆ ನಿನ್ನೆ ಬಿಜೆಪಿ ಜೆಡಿಎಸ್ ನಾಯಕರ ಸಭೆ ಆಗಿತ್ತು. ಆದ್ರೆ ಇಲ್ಲಿ ಬಿಜೆಪಿ ಜೆಡಿಎಸ್ ನಾಯಕರ ಪಟ್ಟಿನ ನಡುವೆ ಟಿಕೇಟ್ ಘೋಷಣೆ ಸಂಬಂಧ ಅಂತಿಮ ಚರ್ಚೆ ತಾರ್ಕಿಕ ಅಂತ್ಯ ಕಾಣಿಲ್ಲ. ಅದಕ್ಕೆ ಇನ್ನು ಕೂಡ ಚರ್ಚೆ ಮುಂದುವರಿದಿದೆ.ಇದರ ನಡುವೆ ಧವಳಗಿರಿ ನಿವಾಸದ ಬಳಿ ಮಾಧ್ಯಮದವರೊಂದಿಗೆಮಾತನಾಡಿದ,ಯಡಿಯೂರಪ್ಪ, ಚನ್ನಪಟ್ಟಣದಲ್ಲಿ ಜೆಡಿಸ್‌ನವ್ರು ಯಾರಿಗೆ ಬೇಕೋ ಅವರ ಹೆಸರನ್ನು ಘೋಷಣೆ ಮಾಡಿಕೊಳ್ತಾರೆ. ಈಗಾಗಲೇ ಅಮಿತ್ ಷಾ ಅವರೂ ಚನ್ನಪಟ್ಟಣದಲ್ಲಿ ಜೆಡಿಎಸ್ ನವ್ರು ಘೋಷಣೆ ಮಾಡ್ತಾರೆ ಎಂದು ಹೇಳಿದ್ದಾರೆ.ಈ ಮೂಲಕ ಚನ್ನಪಟ್ಟಣ ಜೆಡಿಎಸ್‌ನವರ ಕ್ಷೇತ್ರ, ಅವರಿಗೆ ಯಾರು ಬೇಕೋ ಅವರ ಹೆಸರು ಘೋಷಣೆ ಮಾಡ್ತಾರೆ ಎಂದು ಟಿಕೆಟ್ ಜಗ್ಗಾಟಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.ಈ ಹೇಳಿಕೆ ಬಿಜೆಪಿಯಲ್ಲೂ ಸಂಚಲನ ಮೂಡಿಸಿದೆ

ಉಪಚುನಾವಣೆ ರಂಗು ಜೋರಾಗ್ತಿದ್ದಂತೆ ಮೈತ್ರಿಕೂಟದಲ್ಲಿನ ಪೈಪೋಟಿಯೂ ಜೋರಾಗುತ್ತಿದೆ. ಜೆಡಿಎಸ್ ಗೆ ಚನ್ನಪಟ್ಟಣ ಮೈತ್ರಿ ಸೀಟು ಸಿಗುವ ಸಾಧ್ಯತೆಯಿದೆ. ಒಂದು ಕಡೆ ನಿಖಿಲ್ ಸ್ಪರ್ಧೆ ಮಾಡ್ತಾರೆ ಎನ್ನಲಾಗ್ತಿದೆ. ಇನ್ನೊಂದು ಕಡೆ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಎನ್ನಲಾಗ್ತಿದೆ. ಯಾರಿಗೆ ಟಿಕೆಟ್ ಸಿಗುತ್ತೆ? ಯೋಗೀಶ್ವರ್ ನಡೆ ಎನಾಗುತ್ತೆ ಎಂಬ ಕುತೂಹಲ ಜೋರಾಗಿದೆ.

 

RELATED ARTICLES

Related Articles

TRENDING ARTICLES