Monday, January 13, 2025

 ಚಿಕ್ಕಮಗಳೂರಿನಲ್ಲಿ ಕಬ್ಬೆಕ್ಕುಗಳ ಸರಣಿ ಸಾವು

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರಣಿ ಕಬ್ಬೆಕ್ಕುಗಳು ಸರದಿ ಸಾಲಲ್ಲಿ ಸಾಯುತ್ತಿದ್ದು ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ ಮೂಡಿಗೆರೆ ತಾಲೂಕಿನ ಹಳೇಕೋಟೆಯ ಹರ್ಷ ಎಂಬುವರ ಕಾಫಿ ತೋಟದಲ್ಲಿ ಕಳೆದ 20 ದಿನಗಳಲ್ಲಿ ಮೂರು ಕಬ್ಬೆಕ್ಕುಗಳು ಸಾವನ್ನಪ್ಪಿವೆ. 20 ದಿನಗಳ ಹಿಂದೆ ಒಂದು ಕಬ್ಬೆಕ್ಕು ಸಾವನ್ನಪ್ಪಿತ್ತು. ಆ ಬಳಿಕ ವಾರದ ಹಿಂದೆ ಮತ್ತೊಂದು ಕಬ್ಬೆಕ್ಕು ಸತ್ತಿತ್ತು. ಇವತ್ತು ಕೂಡ ಮತ್ತೊಂದು ಕಬ್ಬೆಕ್ಕು ಸಾವನ್ನಪ್ಪಿದ್ದು ಕಾಫಿ ತೋಟದ ಮಾಲೀಕ ಹರ್ಷ ಸಾವನ್ನಪ್ಪಿರೋದನ್ನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇನ್ನೂ ಸಾಯೋ ಮೊದಲು ಮಂಕಾಗೋ ಕಬ್ಬೆಕ್ಕುಗಳು, ನರಳಾಡಿ-ನರಳಾಡಿ ಸಾಯುತ್ತಿರೋದು ಸ್ಥಳಿಯರ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಕಬ್ಬೆಕ್ಕುಗಳು ಮನುಷ್ಯನ ಕಣ್ಣಿಗೆ ಬೀಳೋದೇ ಅಪರೂಪ. ಅಂತದ್ರಲ್ಲಿ ಕಾಫಿತೋಟದಲ್ಲಿ ಕಬ್ಬೆಕ್ಕುಗಳು ಹೀಗೆ ಸರದಿ ಸಾಲಲ್ಲಿ ಸಾಯುತ್ತಿರೋದು ಸ್ಥಳೀಯರ ನಿದ್ದೆಗೆಡಿಸಿದೆ. ಸ್ಥಳಕ್ಕೆ ಬಂದು ಕಬ್ಬೆಕ್ಕಿನ ಮೃತದೇಹವನ್ನ ತೆಗೆದುಕೊಂಡು ಹೋಗಿರೋ ಅರಣ್ಯ ಇಲಾಖೆ ಸಿಬ್ಬಂದಿ, ಪರೀಕ್ಷೆಗೆ ಮುಂದಾಗಿದ್ದಾರೆ. ಕೊರೊನಾದ ಕರಿನೆರಳ ಮಧ್ಯೆ ಕಬ್ಬೆಕ್ಕುಗಳ ಸರಣಿ ಸಾವು ಕಾಫಿನಾಡಿಗರನ್ನ ಆತಂಕಕ್ಕೀಡುಮಾಡಿದೆ…

RELATED ARTICLES

Related Articles

TRENDING ARTICLES