ಬೆಂಗಳೂರು : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಮತ್ತೊಂದು ಅವಾಂತರ ನಡೆದಿದೆ. ಆಸ್ಪತ್ರೆಯಿಂದ ಇಂದು ಕೊರೋನಾ ಸೋಂಕಿತ ವ್ಯಕ್ತಿ ಪರಾರಿಯಾಗಿದ್ದು, ಇದಕ್ಕೆ ಆಸ್ಪತ್ರೆ ಅವ್ಯವಸ್ಥೆಯೇ ಕಾರಣ ಎಂದು ಹೇಳಲಾಗುತ್ತಿದೆ.
ನಿನ್ನೆಯಷ್ಟೆ ವಿಕ್ಟೊರಿಯಾ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡಲಾಗಿತ್ತು. ಇಂದು ಸೋಂಕಿತ ವ್ಯಕ್ತಿಯೊಬ್ಬ ಭದ್ರತಾ ಸಿಬ್ಬಂದಿಗೆ ಉಗುಳಿ, ಪೊಲೀಸ್ ಸಿಬ್ಬಂದಿ, ಸೆಕ್ಯೂರಿಟಿಯನ್ನ ನೂಕಿ ಪಾರಾರಿಯಾಗಿದ್ದಾನೆ. ಇನ್ನು ಈ ವ್ಯಕ್ತಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಹೇಳಲಾಗುತ್ತಿದೆ. ಸದ್ಯ ಈ ವ್ಯಕ್ತಿ ಪರಾರಿಯಾಗಿದ್ದು ಹೊರಗೆ ಇನ್ನು ಎಷ್ಟು ಜನರಿಗೆ ವೈರೆಸ್ ಅಂಟಿಸುತ್ತಾನೋ ಎಂಬ ಭಯ ಶುರುವಾಗಿದ್ದಲ್ಲದೆ. ಆರೋಗ್ಯ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದ್ದಾನೆ.