ಕೋಲಾರ : ಕೋಲಾರ ಜಿಲ್ಲೆಯಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷೆಗೆ ಅಂತಿಮ ಸಿದ್ದತೆ ನಡೆಯುತ್ತಿದೆ. ಜಿಲ್ಲೆಯಲ್ಲಿ 20906 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಜಿಲ್ಲಾದ್ಯಂತ 70 ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಹೊರ ರಾಜ್ಯದ 19 ಮಂದಿ ವಿದ್ಯಾರ್ಥಿಗಳೂ ಇಲ್ಲಿ ಪರೀಕ್ಷೆ ಬರೆಯೋದಿಕ್ಕೆ ಅಗತ್ಯ ಕ್ರಮವನ್ನು ಜರುಗಿಸಲಾಗಿದೆ. ಈಗಾಗಲೇ ಪರೀಕ್ಷಾ ಕೇಂದ್ರಗಳನ್ನು ಸ್ವಚ್ಛತೆಗೊಳಿಸುವ ಕೆಲಸ ಆರಂಭವಾಗಿದೆ.
ಪರೀಕ್ಷಾ ಕಾರ್ಯಕ್ಕೆ ನಿಯೋಜನೆಯಾಗಿರುವ ಸಿಬ್ಬಂದಿಯು ಮಧ್ಯಾಹ್ನದ ವೇಳೆಗೆ ಪರೀಕ್ಷಾರ್ಥಿಗಳ ನೋಂದಣಿ ಸಂಖ್ಯೆಯನ್ನು ಕುರ್ಚಿಯ ಮೇಲೆ ಬರೆಯಲಿದ್ದಾರೆ. ಶಿಕ್ಷಣ ಇಲಾಖೆಯಿಂದ ಈಗಾಗಲೇ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕೋವಿಡ್ ನಿಯಮ ಪಾಲನೆಯ ಬಗ್ಗೆ ಮಾಹಿತಿಯನ್ನು ಕೊಡಲಾಗಿದೆ. ಈ ನಿಟ್ಟಿನಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷೆಯ ಅಣುಕು ಕಾರ್ಯಕ್ರಮವನ್ನೂ ಈ ಮಧ್ಯೆ ನಡೆಸಲಾಗಿತ್ತು.