Wednesday, October 2, 2024

ಗಂಗಾರತಿ ರೀತಿಯಲ್ಲಿ ಕಾವೇರಿ ನದಿಗೆ ಆರತಿ ಮಾಡಲು ಸರ್ಕಾರದ ಸಿದ್ಧತೆ.

ಮಂಡ್ಯ : ವಾರಣಾಸಿಯಲ್ಲಿ ಗಂಗಾನದಿಗೆ ಮಾಡುವ ಆರತಿಯು ಜಗತ್ಪ್ರಸಿದ್ದಿ ಪಡೆದಿದೆ. ಅದೇ ರೀತಿಯಲ್ಲಿ ಕಾವೇರಿ ನದಿಗೂ ಆರತಿ ಮಾಡಬೇಕು ಎಂದು ಅನೇಕರು ಸರ್ಕಾರದ ಮುಂದೆ ಮನವಿ ಮಾಡಿದ್ದರು ಅದಕ್ಕೆ ಸ್ಪಂದಿಸಿರುವ ಸರ್ಕಾರ ಅ.03 ರಿಂದ ಅ.08ರವರೆಗೆ 5 ದಿನಗಳ ಕಾಲ ಪ್ರಾಯೋಗಿಕವಾಗಿ ಕಾವೇರಿ ನದಿಗೆ ಆರತಿ ಮಾಡಲು ಮುಂದಾಗಿದೆ.

ಶ್ರೀ ರಂಗಪಟ್ಟಣದ ರಂಗನಾಥ ಸ್ವಾಮಿ ದೇಗುಲದ ಬಳಿಯ ಸ್ನಾನ ಘಟ್ಟದಲ್ಲಿ ಕಾವೇರಿ ನದಿಗೆ ಆರತಿ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿತ್ತಿದೆ. ಶ್ರೀರಂಗಪಟ್ಟಣದ ಪ್ರಸಿದ್ದ ಅರ್ಚಕ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಕಾವೇರಿ ಆರತಿ ಪೂಜಾ ಕೈಂಕರ್ಯ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.

ಕಾವೇರಿ ಆರತಿಗಾಗಿ ಶ್ರೀ ರಂಗ ಪಟ್ಟಣದ ಬಳಿ ಭರದಿಂದ ಸಿದ್ದತೆಗಳು ನಡೆಯುತ್ತಿದ್ದು. ಸ್ನಾನ ಘಟ್ಟದ ಬಳಿಯಿರುವ ಕಟ್ಟಡಗಳು ಮತ್ತು ದೇಗುಲಕ್ಕೆ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದ್ದು. ರಾತ್ರಿ ವೇಳೆ ಆರತಿ ನಡೆಯುವುದರಿಂದ ಬೆಳಕಿಗಾಗಿ ವಿಧ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಸಲಾಗುತ್ತಿದೆ.

ಪ್ರಾಯೋಗಿಕ ಆರತಿಯು ಯಶಸ್ವಿಯಾದರೆ ಗಂಗಾರತಿ ರೀತಿಯಲ್ಲಿ ಪ್ರತಿದಿನವು ಕಾವೇರಿ ಆರತಿ ನಡೆಸುವ ಚಿಂತನೆಯಲ್ಲಿದ್ದು. ಶಾಸಕ ರಮೇಶ್ ಬಾಬು ನೇತೃತ್ವದಲ್ಲಿ ಎಲ್ಲಾ ಕಾರ್ಯಗಳು ಭರದಿಂದ ಸಾಗಿವೆ. ಶಾಸಕ ಚೆಲುವರಾಯ ಸ್ವಾಮಿ ಹೇಳಿಕೆ ನೀಡಿದ್ದು ಸಾಂಕೇತಿಕವಾಗಿ ಕಾವೇರಿ ಆರತಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES