Wednesday, October 2, 2024

ಮಹಿಳೆಯರ ಸುರಕ್ಷತೆಗಾಗಿ ಬೆಂಗಳೂರಿನಲ್ಲಿ ತಲೆ ಎತ್ತಿದೆ ಸ್ಮಾರ್ಟ್​ ಬಸ್ ಸ್ಟ್ಯಾಂಡ್

ಬೆಂಗಳೂರು : ಬೆಂಗಳೂರಿನಲ್ಲಿ ಹೊಸ ಸ್ಮಾರ್ಟ್ ಬಸ್​ಸ್ಟ್ಯಾಂಡ್ ಉದ್ಘಾಟನೆಯಾಗಿದ್ದು. ನಗರದ ನೃಪತುಂಗ ರಸ್ತೆಯಲ್ಲಿ ಈ ಬಸ್ ಸ್ಟ್ಯಾಂಡ್ ನಿರ್ಮಾಣವಾಗಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಹೆಚ್ಚುಆಸಕ್ತಿವಹಿಸಿ ಇದನ್ನು ನಿರ್ಮಿಸಲಾಗಿದೆ.

ಶಿಲ್ಪಾ ಫೌಂಡೇಶನ್ ವತಿಯಿಂದ ಸ್ಮಾರ್ಟ್ ಬಸ್ ಸ್ಡ್ಯಾಂಡ್ ನಿರ್ಮಿಸಿದ್ದು. ನಗರದ ನೃಪತುಂಗ ರಸ್ತೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇಂದು (ಅ.02) ಬೆಳಿಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇದನ್ನು ಉದ್ಘಾಟನೆ ಮಾಡಿದ್ದಾರೆ.

ಬಸ್​ಸ್ಟ್ಯಾಂಡ್ ವಿಶೇಷತೆಗಳು

ಸ್ಮಾರ್ಟ್​ ಬಸ್ ಸ್ಟ್ಯಾಂಡ್​ನಲ್ಲಿ ಎರಡು ಸಿಸಿಟಿವಿಗಳಿದ್ದು ಬಸ್​ಸ್ಟ್ಯಾಂಡಿನಲ್ಲಿ ನಡೆಯುವ ಎಲ್ಲಾ ಚಲನ ವಲನಗಳ ಮೇಲೆ ನಿಗಾವಹಿಸಬಹುದು.

ಬಸ್​ಸ್ಟ್ಯಾಂಡಿನಲ್ಲಿ ಪ್ಯಾನಿಕ್ ಬಟನ್ ಅಳವಡಿಸಿದ್ದು. ಪ್ಯಾನಿಕ್ ಬಟನ್ ಮತ್ತು ಸಿಸಿಟಿವಿಯನ್ನು ಸ್ಥಳೀಯ ಪೋಲಿಸ್ ಠಾಣೆಯಿಂದ ನಿರ್ವಹಿಸಬಹುದ್ದಾಗಿದ್ದು. ಇವುಗಳ ಆ್ಯಕ್ಸಸ್ ಹಲಸೂರು ಗೇಟ್ ಪೋಲಿಸ್ ಠಾಣೆಯಲ್ಲಿ ಇರಲಿದೆ.

ದಿನದ 24 ಗಂಟೆಯೂ ಬಸ್​ಸ್ಟ್ಯಾಂಡಿನಲ್ಲಿ ಕರೆಂಟ್ ಲೈಟಿಂಗ್ ವ್ಯವಸ್ಥೆ ಇದ್ದು. ಮೊಬೈಲ್ ಮತ್ತು ಲ್ಯಾಪ್​ಟಾಪ್  ಚಾರ್ಜಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.

ಯಾವ ಸಮಯಕ್ಕೆ ಯಾವ ಬಸ್ ಬರಲಿದೆ ಎಂದು ತೋರಿಸುವ ಬಸ್ ಇನ್​ರ್ಫಮೇಶನ್ ಡಿಸ್ಪ್ಲೆಯನ್ನು ಈ ಬಸ್​ಸ್ಟ್ಯಾಂಡ್ ಒಳಗೊಂಡಿದೆ.

 

RELATED ARTICLES

Related Articles

TRENDING ARTICLES