Wednesday, October 2, 2024

ಆತ್ಮಸಾಕ್ಷಿ ನ್ಯಾಯಾಲಯ ನೀಡುವ ತೀರ್ಪು ಅತ್ಯುನ್ನತವಾಗಿರುತ್ತದೆ ಎಂದು ಪಾಠ ಮಾಡಿದ ಸಿದ್ದರಾಮಯ್ಯ

ಬೆಂಗಳೂರು : ವಿಶ್ವ ಅಹಿಂಸಾ ದಿನಾಚರಣೆಯಲ್ಲಿ ಭಾಗವಹಿಸುತ್ತಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಮಹಾತ್ಮ ಗಾಂಧಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟ ಸಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಅವರು, ಮಹಾತ್ಮ ಗಾಂಧಿ ಸತ್ಯ ಮತ್ತು ಅಹಿಂಸಾ ಮಾರ್ಗದಲ್ಲಿ ನಡೆದವರು. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಅವರ ಹೋರಾಟದ ಫಲ. ಅಂತಹ ಮಹಾತ್ಮ ಹುಟ್ಟಿದ ದೇಶದಲ್ಲಿ ನಾವು ಜನಿಸಿರುವುದು ನಮಗೆ ಹೆಮ್ಮೆಯ ವಿಚಾರ ಎಂದಿದ್ದಾರೆ.

ಇನ್ನು ಗಾಂಧೀಜಿ ಕೇವಲ ಭಾರತಕಷ್ಟೇ ನಾಯಕರಲ್ಲ ಅವರು ಇಡೀ ವಿಶ್ವಕ್ಕೆ ನಾಯಕ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್​ ಒಬಾಮ ಹೇಳಿದ್ದಾರೆ. ಗಾಂಧೀಜಿ ಇಂದು ನಮ್ಮ ಜೊತೆ ಇಲ್ಲದಿರಬಹುದು ಆದರೆ ಅವರ ವಿಚಾರಗಳು ನಮ್ಮ ಜೊತೆ ಯಾವಾಗಲು ಇರುತ್ತವೆ. ಕೆಲವರು ಗಾಂಧೀಜಿ ಅವರನ್ನು ಕೊಂದಿದ್ದಾರೆ ಆದರೆ ಅವರ ವಿಚಾರಗಳೂ ನಮ್ಮ ಜೊತೆ ಯಾವಾಗಲು ಜೀವಂತವಾಗಿರುತ್ತವೆ ಎಂದರು.

ನ್ಯಾಯಾಲಯ ವ್ಯವಸ್ಥೆಯ ಬಗ್ಗೆ ಮಾರ್ಮಿಕವಾಗಿ ನುಡಿದ ಸಿದ್ದರಾಮಯ್ಯ ಈಗ ಇರುವ ಎಲ್ಲಾ ನ್ಯಾಯಾಲಯಗಳ ಮೇಲೆ ಅತ್ತುನ್ನತ ನ್ಯಾಯಾಲಯವೊಂದಿದೆ. ಅದೇ ಆತ್ಮಸಾಕ್ಷಿಯ ನ್ಯಾಯಾಲಯ. ಕೆಲವೊಮ್ಮೆ ಬೇರೆ ನ್ಯಾಯಲಯಗಳಲ್ಲಿ ನ್ಯಾಯ ಸಿಗದಿರಬಹುದು ಆದರೆ ನಮ್ಮ ಆತ್ಮಸಾಕ್ಷಿಯ ಮುಂದೆ ಬೇರೆ ಯಾವುದೇ ನ್ಯಾಯಾಲಯವಿಲ್ಲ. ಆದ್ದರಿಂದ ಯಾರೇ ನಮ್ಮನ್ನು, ನಾವು ಮಾಡುವ ಕೆಲಸವನ್ನು ತೆಗಳಲಿ ಅಥವಾ ತೆಗಳದೇ ಇರಲಿ ನಾವು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

RELATED ARTICLES

Related Articles

TRENDING ARTICLES