Sunday, January 12, 2025

ಗ್ರಹಣದ ಸಮಯದಲ್ಲಿ ಒನಕೆ ನೀರಲ್ಲಿ…

ವಿಜಯಪುರ :  ಕಳೆದ ಹಲವು ವರ್ಷಗಳಿಂದ ಸಹಿತ ಇಂತ ಆಚರಣೆವೊಂದು ನಡೆದುಕೊಂಡು ಬರುತ್ತಿದೆ. ವಿಜಯಪುರ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗ್ರಹಣದ ಸಂದರ್ಭದಲ್ಲಿ ನೀರಿನ ಪಾತ್ರೆಯಲ್ಲಿ ಒನಕೆಯನ್ನು ಇಡುತ್ತಾರೆ.ಗ್ರಹಣ ಮುಗಿದ ಬಳಿಕ ಆ ಒನಕೆ ಬೀಳುತ್ತದೆ ಎಂಬುದು ಇವರ ನಂಬಿಕೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ನಾಲತವಾಡ ಪಟ್ಟಣದ ನಿವಾಸಿ ಯಂಕಪ್ಪ ಕ್ಷತ್ರಿ ಎಂಬುವವರ ಮನೆಯ ಮುಂಭಾಗ ಸಹಿತ ನೀರಿನ ಪಾತ್ರೆಯಲ್ಲಿ ಒನಕೆ ನಿಲ್ಲಿಸಿದ್ದಾರೆ. ಹಾಗೆ ವಿಜಯಪುರ ನಗರದ ಜಾಡರ ಓಣಿಯಲ್ಲಿ ಒನಕೆ ನಿಲ್ಲಿಸಿ ಮಕ್ಕಳು ಕುತೂಹಲದಿಂದ ವಿಕ್ಷಿಸುತ್ತಿದ್ದಾರೆ. ಇನ್ನು ನಗರದ ಗ್ಯಾಂಗ್ ಬಾವಡಿ ಬಡಾವಣೆಯಲ್ಲಿ ಏಳು ವರ್ಷದ ಬಾಲಕ ಸಮರ್ಥ ಸಾರವಾಡ ಎಂಬಾತ ತಮ್ಮ ಮನೆಯ ಮುಂದೆ ಹೀಗೆ ನೀರಿನ ಪಾತ್ರೆಯಲ್ಲಿ ಲಟ್ಟಣಿಗೆ ಇಟ್ಟಿದ್ದಾನೆ. ಹೀಗೆ ಹಲವು ಸಂಪ್ರದಾಯಗಳು ಗ್ರಹಣದ ಸಮಯದಲ್ಲಿ ಇನ್ನೂ ವರೆಗೂ ಜಿಲ್ಲೆಯ ಜನತೆ ಆಚರಿಸಿಕೊಂಡು ಬರುತ್ತಿದ್ದಾರೆ.

RELATED ARTICLES

Related Articles

TRENDING ARTICLES