ಬೆಂಗಳೂರು : ಇಷ್ಟು ದಿನ ಸಿನಿಮಾ ಹೀರೋಗಳ ಫ್ಯಾನ್ ವಾರ್ ಬಗ್ಗೆ ಕೇಳ್ತಿದ್ವಿ. ಈಗ ರಾಜಕಾರಣಿಗಳ ಫ್ಯಾನ್ಸ್ ವಾರ್ ಕೂಡ ಜೋರಾಗ್ತಿದೆ. ಬೆಂಗಳೂರಿನಲ್ಲಿ ಮೋದಿ ಮತ್ತು ಸಿದ್ದು ಫ್ಯಾನ್ಸ್ ನಡುವೆ ವಾರ್ ನಡೆದಿದೆ.
ಇಷ್ಟು ದಿನ ಸಿನಿಮಾ ಹೀರೋಗಳ ಫ್ಯಾನ್ಸ್ ವಾರ್ ಆಗಿತ್ತು ಈಗ ರಾಜಕಾರಣಿಗಳ ಫ್ಯಾನ್ಸ್ ವಾರ್ ಕೂಡ ಶುರುವಾಗಿದೆ. ಸಿನಿಮಾ ಸ್ಟಾರ್ಗಳ ಫ್ಯಾನ್ಸ್ ವಾರ್ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನಡೆಯುತ್ತೆ. ಆದರೆ, ಪೊಲಿಟಿಷನ್ಸ್ ಫ್ಯಾನ್ಸ್ ವಾರ್ ನೇರಾ ನೇರ ನಡೆದಿದೆ. ನಮ್ಮ ನಾಯಕ ನಿಮ್ಮ ನಾಯಕ ಅಂತಾ ಇಬ್ಬರು ರಾಜಕೀಯ ನಾಯಕರ ಫ್ಯಾನ್ಸ್ ಮಧ್ಯ ಗಲಾಟೆ ನಡೆದಿರೋ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಪ್ರಧಾನಿ ಮೋದಿಗೆ ಬೈದಿದ್ದಕ್ಕೆ ಸಿದ್ದರಾಮಯ್ಯ ಅಭಿಮಾನಿ ಮೇಲೆ ಅಟ್ಯಾಕ್ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ಸಿದ್ದರಾಮಯ್ಯ ಅಭಿಮಾನಿ ಮೇಲೆ ಮೋದಿ ಫ್ಯಾನ್ಸ್ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ವಿಡಿಯೋ ವೊಂದನ್ನ ಹುಸೇನ್ ಎಂಬ ಫೇಸ್ಬುಕ್ ಅಕೌಂಟ್ನಲ್ಲಿ ಶೇರ್ ಮಾಡಲಾಗಿದೆ. ಆ ವಿಡಿಯೋದಲ್ಲಿ ಓರ್ವ ವ್ಯಕ್ತಿಯನ್ನ ಅಂದ್ರೆ ಸಿಎಂ ಸಿದ್ದರಾಮಯ್ಯ ಫ್ಯಾನ್ನ ಹದಿನೈದಕ್ಕೂ ಹೆಚ್ಚು ಜನ ಮೋದಿ ಅಭಿಮಾನಿಗಳು ಮೋದಿ ಮೋದಿ ಎಂದು ಹೇಳು ಅಂತಾ ಸಿದ್ದು ಫ್ಯಾನ್ ಮೇಲೆ ಹಲ್ಲೆ ಮಾಡಿದ್ದಾರಂತೆ. ಬೆಂಗಳೂರಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಹಲ್ಲೆ ಮಾಡಿ ಸಿದ್ಧು ಅಭಿಮಾನಿಯನ್ನ ಉಪ್ಪಾರಪೇಟೆ ಠಾಣೆಗೆ ಕರೆದೊಯ್ದು ಮೋದಿ ಫ್ಯಾನ್ಸ್ ಒಪ್ಪಿಸಿದ್ರಂತೆ.
ಅಲ್ಲದೇ ಹಲ್ಲೆ ಮಾಡಿರೋ ವಿಡಿಯೋವನ್ನ ಹುಸೇನ್ ಎಂಬಾತ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ದಾಳಿ ಮಾಡಿರೋರ ವಿರುದ್ಧ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕೇಸ್ ದಾಖಲಿಸಿಕೊಳ್ಳದ ಪೊಲೀಸರು ಆ ಯುವಕನನ್ನು ಬಿಟ್ಟು ಕಳಿಸಿದ್ರು. ವಿಡಿಯೋ ವೈರಲ್ ಆಗ್ತಿದ್ದಂತೆಯೆ ಪೊಲೀಸರು ಮತ್ತೆ ಘಟನೆ ಸಂಬಂಧ ಮಾಹಿತಿ ಕಲೆ ಹಾಕ್ತಿದ್ದಾರೆ.
ವೀರೇಶ ಪತ್ತಾರ ಕ್ರೈಂ ಬ್ಯೂರೋ ಪವರ್ ಟಿವಿ ಬೆಂಗಳೂರು