ರಾಮನಗರ : ರಾಮನಗರ ಜಿಲ್ಲೆ ಬಿಡದಿ ಕೈಗಾರಿಕೆ ಪ್ರದೇಶದಲ್ಲಿರುವ ದೇಶದ ದೊಡ್ಡ ಟಯೋಟ ಕಾರು ಉತ್ಪಾದನಾ ಘಟಕದಲ್ಲಿ ಕೆಲಸ ಮಾಡ್ತಿದ್ದ ಇಬ್ಬರು ಯುವಕರಿಗೆ ಕರೋನ ಪಾಸಿಟಿವ್ ಬಂದ ಹಿನ್ನಲೆ, ಬೆಂಗಳೂರಿನ ಹೆಬ್ಬಗೋಡಿಯ ಓರ್ವ ಯುವಕ ಹಾಗೂ ಮಂಡ್ಯ ಜಿಲ್ಲೆ ಪಾಂಡವಪುರ ಮೂಲದ ಯುವಕನಿಗೆ ಸೋಂಕು ಧೃಡವಾಗಿದ್ದು, ಇದೀಗ ಸೋಂಕಿತ ಯುವಕರ ಜೊತೆ ಕೆಲಸ ಮಾಡಿದ್ದ ಸಿಬ್ಬಂದಿಗಳಿಗೆ ಇದೀಗ ಆತಂಕ ಶುರುವಾಗಿದ್ದು, ಕಂಪನಿಯನ್ನು ಸೀಲ್ ಡೌನ್ ಮಾಡಬೇಕೆಂದು ಕಂಪನಿ ಸಿಬ್ಬಂದಿಗಳು ಹಾಗೂ ಯೂನಿಯನ್ ಅವರ ಒತ್ತಾಯಕ್ಕೆ ಮಣಿದ ಟಯೋಟ ಆಡಳಿತ ಮಂಡಳಿ ತನ್ನ ಕಂಪನಿಯನ್ನು ಸದ್ಯದ ಮಟ್ಟಿಗೆ ಬಂದ್ ಮಾಡಿದ್ದು, 350 ಎಕರೆಗೂ ಕ್ಕೂ ಹೆಚ್ಚು ಪ್ರದೇಶದಲ್ಲಿರುವ ಟಯೋಟ ಕಂಪನಿಯಲ್ಲಿ ಸುಮಾರು 15 ಸಾವಿರ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅದರ ಮೇಲೆ ಕಂಪನಿ ತನ್ನ ಕಾರ್ಯ ನಿರ್ವಹಿಸಲಿದೆ.