ವೆಸ್ಟ್ಇಂಡೀಸ್ ನ ಪ್ರಾವಿಡೆನ್ಸ್ ಮೈದಾನದಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಮ್ಯಾಚ್ ನಲ್ಲಿ ಟೀಮ್ಇಂಡಿಯಾ ಮಹಿಳೆಯರು 52 ರನ್ ಅಂತರದ ಜಯ ಸಾಧಿಸಿದ್ದಾರೆ. ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ರ ಅರ್ಧಶತಕ ಹಾಗೂ ರಾಧಾಯಾದವ್ ರವರ ಬೌಲಿಂಗ್ ಕೈಚಳಕ ದ ನೆರವಿನಿಂದ ಗೆದ್ದ ಹರ್ಮನ್ ಪ್ರೀತ್ ಕೌರ್ ಬಳಗ ಟಿ-20 ವರ್ಲ್ಡ್ ಕಪ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಮಿಥಾಲಿ ರಾಜ್ ಹಾಗೂ ಸ್ಮೃತಿಮಂದಾನ ಉತ್ತಮ ಆರಂಭ ನೀಡಿದ್ರು. ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಹಾಫ್ ಸೆಂಚುರಿ ಸಿಡಿಸಿದ್ರು. 56 ಎಸೆತಗಳಲ್ಲಿ 1 ಸಿಕ್ಸರ್,4 ಬೌಂಡರಿ ಸಿಡಿಸಿದ ಮಿಥಾಲಿ 51 ರನ್ ಗಳಿಸಿದ್ರು. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ 29 ಎಸೆತಗಳಲ್ಲಿ 1ಸಿಕ್ಸರ್,4 ಬೌಂಡರಿ ಸೇರಿ 33 ರನ್ ಬಾರಿಸಿದ್ರು. ಇನ್ನು ಜೆಮಿಮಾ ರೊಡ್ರಿಗಸ್ 18 ರನ್‌ಗಳ ಕಾಣಿಕೆ ನೀಡಿದ್ರು. ಪರಿಣಾಮವಾಗಿ ಟೀಮ್ ಇಂಡಿಯಾ ನಿಗಧಿತ ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಪೇರಿಸಿತು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಐರ್ಲೆಂಡ್ ಬಳಗ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 93 ರನ್ ಸಿಡಿಸಿತು. ಭಾರತದ ಆರ್.ಪಿ ಯಾದವ್ 25 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದ್ರು.
ಗುಂಪು ವಿಭಾಗದಲ್ಲಿ ಇನ್ನೊಂದು ಪಂದ್ಯ ಉಳಿದಿದ್ದು ನವೆಂಬರ್ 17ರಂದು ನಡೆಯಲಿರೋ ಈ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ.