ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟಪ್ರದೇದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯಕ್ಕೆ ಸೇರುವ ಕೃಷ್ಣಾ, ದೂದಗಂಗಾ, ವೇದಗಂಗಾ ನದಿಗಳ ನೀರಿನ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು ಭಾರಿ ಪ್ರಮಾಣದ ನೀರು ಹರಿದು ಬರ್ತಾ ಇದೆ. ಇದರ ಪರಿಣಾಮ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಮೂರು ಸೇತುವೆಗಳು ಮುಳುಗಡೆಯಾಗಿದ್ದು ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ ನಿಪ್ಪಾಣಿ ತಾಲೂಕಿನ ದೂದಗಂಗಾ ನದಿಯ ಕಾರದಗಾ-ಭೋಜ, ಭೊಜವಾಡಿ-ಕುಣ್ಣುರ ಹಾಗೂ ವೇದಗಂಗಾ ನದಿಯ ಕುಣ್ಣುರ- ಬಾರವಾಡ ಗ್ರಾಮದ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು ಜನ ಸುತ್ತುವರೆದು ಸಂಚಾರ ನಡೆಸುವಂತಾಗಿದೆ.
ಇನ್ನು ಕಾರದಗಾ ಗ್ರಾಮದ ಬಂಗಾಲಿ ಬಾಬಾ ದೇವಸ್ಥಾನದ ಸುತ್ತಲು ನೀರು ಆವರಿಸಿದೆ. ಇನ್ನು ಬಂದ ಆಗಿರುವ ಸೇತುಗಳಿಗೆ ಬ್ಯಾರಿಕೇಟ್ ಹಾಕಿ ಜನ ನದಿ ಕಡೆಗೆ ತೆರಳದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ ಬಂದೊಬಸ್ತ ಮಾಡಲಾಗಿದೆ. ನದಿ ತೀರದ ರೈತರು ತಮ್ಮ ಪಂಪಸೇಟ್ ಗಳನ್ನ ತೆಗೆದುಕೊಂಡು ಸುರಕ್ಷಿತ ಸ್ಥಳಗಳಿಗೆ ಸಾಗಿಸುತ್ತಿದ್ದಾರೆ. ಮಳೆಗಾಲದ ಆರಂಭದಲ್ಲಿ ಹೆಚ್ಚಿನ ನೀರು ಹರಿದುಬರುತ್ತಿವ ಹಿನ್ನಲೆ ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಕೂಡ ಹೆಚ್ಚಾಗಿದೆ.