ಬಾಗಲಕೋಟೆ :೧೮ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣಕ್ಕೆ ಹತ್ತಿರವಿರುವ ಸೀಮಿಕೇರಿ ಬಾಯಪಾಸ್ ಹೊಟೇಲ್ವೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ 3 ಸಿಬ್ಬಂದಿಗೆ ಕೊರೊನಾ ಸೋಂಕು ದೃಢ ಪಟ್ಟಿರುವುದು ಗಮನಕ್ಕೆ ಬಂದಿರುತ್ತದೆ. ಕಾರಣ ಈ ಭಾಗದ ಹೊಟೇಲ್ಗಳಲ್ಲಿ ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ, ಗುತ್ತಿಗೆ ಸಿಬ್ಬಂದಿ, ಚಹಾ, ಉಪಾಹಾರ ಇತ್ಯಾದಿ ಸ್ವೀಕರಿಸದಿರಲು ತಿಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಣ ಬರುವವರೆಗೆ ಸಿಬ್ಬಂದಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಎಂದು ಜೂನ್ 17 ನಿನ್ನೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ ಹೆಚ್ ಬಿ ಪಾಟೀಲ್ ಸುತ್ತೋಲೆ ಹೊರಡಿಸಿದ್ದರು. ಎಡವಟ್ಟಿನ ಸುತ್ತೋಲೆ ಹೊರಡಿಸಿದ್ದ ಡೀನ್ ಡಾ ಹೆಚ್.ಬಿ. ಪಾಟೀಲ್ ಅವರು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಹೊಟೇಲ್ನಲ್ಲಿ ಕೊರೋನಾ ತಗುಲಿರುವ ಬಗ್ಗೆ ಪತ್ರ ಬಂದಿತ್ತು. ಹಾಗಾಗಿ ಮಹಾವಿದ್ಯಾಲಯದಿಂದ ಸಿಬ್ಬಂದಿಗೆ ಸೂಚನೆ ನೀಡಲು ಸುತ್ತೋಲೆ ಹೊರಡಿಸಲಾಗಿತ್ತು. ಆರೋಗ್ಯ ಇಲಾಖೆ ಅಧಿಕಾರಿಗಳು ಹೊಟೇಲ್ ಕ್ವಾರಂಟೈನ್ನಲ್ಲಿದ್ದ ಓರ್ವನಿಗೆ ಸೋಂಕು ತಗುಲಿದೆ ಎಂದು ಮಾಹಿತಿ ನೀಡಿದ್ದಾರೆ. ಜೊತೆಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸೂಚನೆ ಮೇರೆಗೆ ಸುತ್ತೋಲೆ ವಾಪಾಸ್ ಪಡೆಯಲಾಗಿದೆ ಎಂದು ತಿಳಿಸಿದ್ರು.ಏನೇ ಆಗಲಿ ಕೊರೊನಾ ವಿಚಾರದಲ್ಲಿ ಯಾವುದೇ ಮಾಹಿತಿ ಹಂಚಿಕೊಳ್ಳುವಾಗ ಸಂಬಂಧಿಸಿದ ಇಲಾಖೆಯೊಂದಿಗೆ ಖಚಿತಪಡಿಸಿಕೊಂಡು ಸುತ್ತೋಲೆ ಹೊರಡಿಸಬೇಕು. ಆದರೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಸುಳ್ಳು ಸುದ್ದಿ ಸುತ್ತೋಲೆ ಹೊರಡಿಸಿ ಪೇಚಿಗೆ ಸಿಲುಕಿ ವದಂತಿಗೆ ಎಡೆಮಾಡಿ ಕೊಟ್ಟಿದ್ದಾರೆ…!