Sunday, January 12, 2025

ಕಿಮ್ಸ್ ನಲ್ಲಿ ಮೇಲ್ದರ್ಜೇಗೇರಿಸಿದ ವೈರಾಲಜಿ ಪ್ರಯೋಗಾಲಯ ಉದ್ಘಾಟನೆ !

ಧಾರವಾಡ : ಕಿಮ್ಸ್ ನಲ್ಲಿ ಮೇಲ್ದರ್ಜೇಗೇರಿಸಿದ ವೈರಾಲಜಿ ಪ್ರಯೋಗಾಲಯ ಕಾರ್ಯಾರಂಭ ಮಾಡಿದ್ದು ಇದು ಧಾರವಾಡ ಜಿಲ್ಲೆಯ ನಾಲ್ಕನೆಯ ಕೋವಿಡ್ ತಪಾಸಣೆ ಪ್ರಯೋಗಾಲವಾಗಿದೆ.ಜಿಲ್ಲೆಯಲ್ಲಿ ಪ್ರತಿನಿತ್ಯ ಸಾವಿರಕ್ಕೂ ಅಧಿಕ ಜನರ ತ್ವರಿತ ತಪಾಸಣೆ ಸಾಮರ್ಥ್ಯದ ಪ್ರಯೋಗಾಲಯಗಳಿವೆ.ಕೇಂದ್ರದ ಮಾರ್ಗಸೂಚಿಗಳ ಅನುಸಾರ ತಪಾಸಣೆ ಕಾರ್ಯ ಮುಂದುವರೆಯಲಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಹುಬ್ಬಳ್ಳಿ ಕಿಮ್ಸ್ ನಲ್ಲಿ ಇಂದು ಮೇಲ್ದರ್ಜೇಗೇರಿಸಿದ ವೈರಾಲಜಿ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ತಪಾಸಣೆಗೆ ಒಳಪಡಿಸಿದ 24 ಗಂಟೆಗಳೊಳಗೆ ವರದಿ ಪಡೆಯಲು ಸಾಧ್ಯವಾಗುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಮತ್ತು ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಅವರೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ಹೆಚ್ಚು ಪ್ರಯೋಗಾಲಯ ಸ್ಥಾಪನೆ ಕುರಿತು ಮನವರಿಕೆ ಮಾಡಿಕೊಡಲಾಗಿತ್ತು.ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಎನ್ ಡಿ ಆರ್ ಎಫ್ ಅನುದಾನದಲ್ಲಿ ಹೊಸ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಕಿಮ್ಸ್ ನಲ್ಲಿ ಎರಡು, ಡಿಮ್ಹಾನ್ಸ್ ಹಾಗೂ ಎನ್ ಎಮ್ ಆರ್ ಕೇಂದ್ರದಲ್ಲಿ ತಲಾ ಒಂದು ಪ್ರಯೋಗಾಲಗಳಿವೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳು ಮತ್ತು ನಿರ್ದೇಶನದಂತೆ ಕೋವಿಡ್ ತಪಾಸಣೆ ಮುಂದುವರೆಯುತ್ತದೆ ಎಂದು ಸಚಿವರು ಹೇಳಿದರು.

RELATED ARTICLES

Related Articles

TRENDING ARTICLES