ಮಧುಗಿರಿ: ಜಮೀನಿನ ಕೊಳವೆ ಬಾವಿ ವಿಚಾರದಲ್ಲಿ ಜಗಳ ಉಂಟಾಗಿ ದಲಿತ ಕುಟುಂಬಕ್ಕೆ ಸೇರಿದ ವೃದ್ದನ ಕೈ ಕಟ್ ಮಾಡಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ತಿಪ್ಪಾಪುರ ಗ್ರಾಮದ ಹನುಮಂತರಾಯಪ್ಪ(೬೫) ದಲಿತ ಜನಾಂಗಕ್ಕೆ ಸೇರಿದವರಾಗಿದ್ದು, ಅದೇ ಗ್ರಾಮದ ಕುರುಬ ಜನಾಂಗಕ್ಕೆ ಸೇರಿದ ಹಾಗೂ ದೊಡ್ಡಯಲ್ಕೂರು ಗ್ರಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ಮತ್ತು ಸಹೋದರ ಅಶ್ವಥಪ್ಪ ಅವರ ನಡುವೆ ತಡ ರಾತ್ರಿ ಬೋರ್ ವೆಲ್ ವಿಚಾರಕ್ಕೆ ಜಗಳವಾಗಿದೆ. ನಂತರ ಹೀನಾಮಾನವಾಗಿ ನಿಂದಿಸಿ, ಹನುಮಂತರಾಯಪ್ಪನ ಕೈಗೆ ಹಾಗೂ ಕಾಲಿಗೆ ಬಲವಾಗಿ ಕಬ್ಬಿಣದ ರಾಡ್ ನಿಂದ ಹೊಡೆದು ಜಾತಿ ನಿಂದನೆ ಮಾಡಲಾಗಿ ಎಂಬ ಆರೋಪ ಕೇಳಿಬಂದಿದ್ದು, ವೃದ್ಧ ಹನುಮಂತರಾಯಪ್ಪಗೆ ಕೈ ಮೂಳೆ, ಕಾಲಿನ ತೊಡೆ ಭಾಗ ತೀವ್ರ ಪೆಟ್ಟಾಗಿದ್ದು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಲ್ಲದೆ, ಸದ್ಯ ತುಮಕೂರಿನ ಸಿದ್ದಾರ್ಥ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ಹನುಮಂತರಾಯಪ್ಪನ ಪುತ್ರ ಅಶೋಕ್ ತಿಳಿಸಿದ್ದಾರೆ.
ಹೇಮಂತ್ ಕುಮಾರ್. ಜೆ.ಎಸ್ ಪವರ್ ಟಿವಿ ತುಮಕೂರು.