Sunday, October 6, 2024

ಅಳಿಯ ಪ್ರತಾಪ್​ಗೆ ಮಕ್ಕಳ ವಿಚಾರದಲ್ಲಿ ಕೊರಗಿತ್ತು: ಬಿ.ಸಿ.ಪಾಟೀಲ್​​

ಶಿವಮೊಗ್ಗ: ಮಾಜಿ ಸಚಿವ ಬಿ.ಸಿ.ಪಾಟೀಲ್​​ ಅಳಿಯ ಕೆ.ಜಿ.ಪ್ರತಾಪ್ ಕುಮಾರ್​ (41) ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ಬಿ.ಸಿ.ಪಾಟೀಲ್​ ಪ್ರತಿಕ್ರಿಯಿಸಿದ್ದಾರೆ. ಬೆಳಿಗ್ಗೆ ಒಟ್ಟಿಗೆ ತಿಂಡಿ ತಿಂದಿದ್ವಿ. ಪ್ರತಾಪ್​ಗೆ ಮಕ್ಕಳ ವಿಚಾರದಲ್ಲಿ ಕೊರಗಿತ್ತು. ಎರಡು ತಿಂಗಳು ಡಿ ಅಡಿಕ್ಷನ್​​​ ಸೆಂಟರ್‌ನಲ್ಲಿ ಇದ್ದರು. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲವೆಂದು ತಿಳಿಸಿದ್ದಾರೆ.

ಇದನ್ನು ಓದಿ: ರೈತರ ‘ಜೀವ ಹಿಂಡುತ್ತಿದೆ’ ಈ ಹಂತಕ ಸರ್ಕಾರ: ಬಿಜೆಪಿ ಕಿಡಿ

ಇಂದು ಇದ್ದಕ್ಕಿದ್ದಂತೆ ಪ್ರತಾಪ್​​​ ಕಾಣೆಯಾಗಿದ್ದರು. ಕರೆ ಮಾಡಿದರೆ ಸ್ವೀಕರಿಸಲಿಲ್ಲ. ಬಳಿಕ ಕರೆ ಸ್ವೀಕರಿಸಿ ಹೊನ್ನಾಳಿ ಮಲೆಬೆನ್ನೂರಿನ ರಸ್ತೆಯಲ್ಲಿ ಇರುವುದಾಗಿ ಮಾಹಿತಿ ನೀಡಿದ್ದರು. ಈ ಸಂಬಂಧ ದಾವಣಗೆರೆ, ಶಿವಮೊಗ್ಗ ಪೊಲೀಸ್​ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ 1.45ಕ್ಕೆ ಸಹೋದರ ಕರೆ ಮಾಡಿ ಅಳಿಯ ಪ್ರತಾಪ್​ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರ ಬಗ್ಗೆ ಮಾಹಿತಿ ನೀಡಿದರು. ದಾವಣಗೆರೆಗೆ ಶಿಫ್ಟ್ ಮಾಡೋಕೆ ಹೇಳಿದ್ದೆ. ಆದರೆ ಶಿವಮೊಗ್ಗ ಆಸ್ಪತ್ರೆ ಹತ್ತಿರವಿದ್ದ ಕಾರಣ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಶಿಕಾರಿಪುರ ಹತ್ತಿರ ಹೋಗುವಾಗ ಜೀವ ಹೋಗಿದೆಯಂತೆ ಎಂದು ತಿಳಿಸಿದರು.

ಮಗಳು ಹಾಗೂ ಪ್ರತಾಪ್​ಗೆ ಮದುವೆಯಾಗಿ 16 ವರ್ಷಗಳು ಆಗಿತ್ತು. ನಮ್ಮ ರಾಜಕೀಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಮಂಗಳವಾರ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಬಿ.ಸಿ.ಪಾಟೀಲ್ ಅವರ ದೊಡ್ಡ ಮಗಳ ಗಂಡ ಪ್ರತಾಪ್ ಕುಮಾರ್​​​ ಸೋಮವಾರ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

RELATED ARTICLES

Related Articles

TRENDING ARTICLES