ಚಿಕ್ಕಬಳ್ಳಾಪುರ : ಕೊರೋನಾ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಬಹುತೇಕ ಕಡೆ ಫ್ರೀ ಬಿಡಲಾಗಿದೆ. ಆದರೆ, ಬಡವರ ಊಟಿ ಎಂತಲೇ ಖ್ಯಾತಿಯಾಗಿರೋ ನಂದಿಗಿರಿಧಾಮದಲ್ಲಿ ಮಾತ್ರ ಜಿಲ್ಲಾಡಳಿತದ ನಿರ್ಧಾರದಿಂದ ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಪರಿಣಾಮ ಕೊರೋನಾ ಜಂಜಾಟದಿಂದ ರಿಲೀಫ್ ಆಗಲು ಪ್ರಕೃತಿಯ ಸೊಬಗು ಸವಿಯಲು ಬಂದಿದ್ದ ಪ್ರವಾಸಿಗರು ವಿಧಿಯಿಲ್ಲದೇ ಬಂದ ದಾರಿಯಲ್ಲಿ ವಾಪಸ್ ಹೋಗುವಂತಾಯಿತು.
ಚಿಕ್ಕಬಳ್ಳಾಪುರದ ನಂದಿಬೆಟ್ಟ ಪ್ರಕೃತಿಯ ಅನನ್ಯ ಸೊಬಗುನಿಂದಲೇ ಎಲ್ಲರನ್ನೂ ಆಕರ್ಷಿಸುತ್ತಿದೆ. ವಿಷೇಶವಾಗಿ ಹೈಟೆಕ್ ಸಿಟಿ ಬೆಂಗಳೂರಿಗೆ ಹತ್ತಿರದಲ್ಲೇ ಇರೋದರಿಂದ ವಿಶೇಷವಾಗಿ ಟೆಕ್ಕಿಗಳು, ಯುವ ಪ್ರೇಮಿಗಳು ನಂದಿಗಿರಿಧಾಮದ ಆಹ್ಲಾದಕರ ವಾತಾವರಣ, ಮಂಜಿನ ಮೋಡಗಳ ಜೊತೆ ಹೆಜ್ಜೆ ಕಾತುರರಾಗುತ್ತಾರೆ. ಅದರಲ್ಲೂ ಕೊರೋನಾ ಜಂಜಾಟದಿಂದ ರಿಲೀಫ್ ಆಗಲು ವೀಕೆಂಡ್ ವಿತ್ ನಂದಿ ಹಿಲ್ಸ್… ಅಂತ ರಮ್ಯ.. ಮನೋಹರ ದೃಶ್ಯಕಾವ್ಯಗಳ ಜೊತೆ ಬೆರೆಯಲು ಬಂದಿದ್ದವರು ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ನಿರ್ಧಾರದಿಂದ ನಂದಿಗಿರಿಗೆ ಪ್ರವೇಶ ಪಡೆಯಲಾರದೇ ವಾಪಸ್ ತೆರಳಿದರು. ಅದರಲ್ಲೂ ವಿಶೇಷವಾಗಿ ದುಬೈನಿಂದ ಬೆಂಗಳೂರಿಗೆ ವಾಪಸ್ ಆಗಿದ್ದ ಯುವತಿ ವರಲಕ್ಷ್ಮೀ ಎಂಬುವರು ನಂದಿಗಿರಿಧಾಮಕ್ಕೆ ಪ್ರವೇಶ ಪಡೆಯಲಾದೇ ತೀವ್ರ ನಿರಾಸೆಯಿಂದ ವಾಪಸ್ ಹೋದರು. ಅಮ್ಮ ಕೂಡ ಮಗಳಿಗೆ ನೆಚ್ಚಿನ ತಾಣ ತೋರಿಸಲಾಗಲಿಲ್ಲ ಎಂಬ ಕೊರಗಿನಿಂದಲೇ ಹಿಂತಿರುಗಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದುವರೆಗೂ 152 ಮಂದಿ ಕೊರೋನಾ ಸೋಂಕಿತರಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಜೂನ್ 30ರ ಮಧ್ಯರಾತ್ರಿವರೆಗೆ ನಂದಿಗಿರಿಧಾಮಕ್ಕೆ ಪ್ರವಾಸಿಗರ ನಿಷೇಧಿಸಿ ಆದೇಶ ಹೊರಡಿಸಿದೆ. ಇದನ್ನರಿಯದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಸಪ್ಪೆ ಮೊರೆ ಹಾಕ್ಕೊಂದು ವಾಪಸ್ ಹೋಗುವಂತಾಯಿತು.
ಇನ್ನೂ ಹೋಟೆಲ್, ದೇವಾಲಯ, ಮಾಲ್ ಗಳು ಓಪನ್ ಆಗಿವೆ ಅನ್ನೋ ಭರದಲ್ಲೇ ನಂದಿಬೆಟ್ಟಕ್ಕೂ ಪ್ರವೇಶ ಇರುತ್ತೆ ಅನ್ಕೊಳ್ಳೋರು ಜೂನ್ ಅಂತ್ಯದವರೆಗೆ ಕಾಯಲೇಬೇಕು. ಇನ್ನೂ ಕೊರೋನಾ ಕಾಟದ ಮಧ್ಯೆಯೂ ಭಯವಿಲ್ಲದೇ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದು ನೋಡಿ ಕೊರೋನಾ ಇಲ್ವೆನೋ ಎಂಬ ಭಾವನೆ ಇತ್ತು….
ಮಲ್ಲಪ್ಪ. ಎಂ.ಶ್ರೀರಾಮ್.ಪವರ್ ಟಿವಿ. ಚಿಕ್ಕಬಳ್ಳಾಪುರ.