ಮಂಡ್ಯ: ಬಟ್ಟೆ ತೊಳೆಯಲು ಹೋಗಿ ಆಯಾತಪ್ಪಿ ಕೆರೆಯಲ್ಲಿ ಮುಳುಗಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವಿಗೀಡಾದ ಘಟನೆ ಮಂಡ್ಯದಲ್ಲಿ ನಡೆದಿದೆ.
ನಾಗಮಂಗಲ ತಾಲ್ಲೂಕಿನ ಬೀರನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಗ್ರಾಮದ ಗೀತಾ ನರಸಿಂಹಯ್ಯ(38), ಮಕ್ಕಳಾದ ಸವಿತಾ (19), ಸೌಮ್ಯ(14) ಮೃತ ದುರ್ದೈವಿಗಳಾಗಿದ್ದಾರೆ.
ಗ್ರಾಮದ ಕೆರೆಗೆ ಬಟ್ಟೆ ಹೊಗೆಯಲು ಮಕ್ಕಳೊಂದಿಗೆ ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ.ನೀರಿಗೆ ಬಿದ್ದ ಮಗಳನ್ನ ರಕ್ಷಿಸಲು ಹೋಗಿ ಮೂವರು ನೀರುಪಾಲಾಗಿದ್ದು, ಕೆರೆಯಲ್ಲಿ ಬಿಂದಿಗೆ ತೇಲುತ್ತಿದ್ದನ್ನ ಗಮನಿಸಿದ ಗ್ರಾಮಸ್ಥರು ಪೋಲಿಸರಿಗೆ ಮಾಹಿತಿ ನೀಡಿ ಕೆರೆಯಲ್ಲಿ ಮುಳುಗಿದ್ದ ಶವ ಪತ್ತೆಹಚ್ಚಿ ಹೊರತೆಗೆಯಲಾಗಿದೆ.
ಇನ್ನು ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ನಾಗಮಂಗಲ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.