Sunday, May 11, 2025

ಭಿಕ್ಷುಕಿಗೆ ದೃಢಪಟ್ಟ ಕೊರೋನಾ ಸೊಂಕು: ಖಾಕಿ ಪಡೆಗೂ ತಂದಿಟ್ಟ ಆತಂಕ

 

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ 75 ವರ್ಷದ ಭಿಕ್ಷುಕಿಗೆ ಕೊರೊನಾ ಸೋಂಕು ದೃಢ ಪಟ್ಟ ಹಿನ್ನೆಲೆ ಬೆಂಡಿಗೇರಿ ಠಾಣೆಯ ಪೊಲೀಸರಿಗೂ ಆತಂಕ ಶುರುವಾಗಿದೆ. ಹೌದು. ಜೂನ್ 12  ರಂದು ಭಿಕ್ಷುಕಿಗೆ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಆಕೆಯನ್ನು ವಾಹನದಲ್ಲಿ ಕರೆತಂದು ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ ಮಾಡಿಸಿದ್ದ ಪೊಲೀಸರಿಗೆ ಆತಂಕ ಪ್ರಾರಂಭವಾಗಿದ್ದು, ನಾಲ್ವರು ಪೊಲೀಸರು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಸರ್ಕಾರಿ ಕ್ವಾರಂಟೈನ ನಲ್ಲಿದ್ದ ಭಿಕ್ಷುಕಿಗೆ ಸೋಂಕು ದೃಢಪಟ್ಟಿರುವ ಹಿನ್ನಲೆ ಖಾಕಿ ಪಡೆಗೂ ಕೊರೋನಾ ಆತಂಕ ಶುರುವಾಗಿದೆ. ಹುಬ್ಬಳ್ಳಿಯ ಬೆಂಡಿಗೇರಿ‌ ಠಾಣೆಯ ಎಲ್ಲ ಪೊಲೀಸರಿಗೆ ಕೋವಿಡ್ ತಪಾಸಣೆ ಮಾಡಿಸಲಾಗುತಿದ್ದು,ಬೆಂಡಿಗೇರಿ ಠಾಣೆಯ 40ಕ್ಕೂ ಹೆಚ್ಚು ಸಿಬ್ಬಂದಿಗೆ ಸ್ವಾಬ್ ಟೆಸ್ಟ್ ಮಾಡಿಸಲಾಗುತ್ತಿದೆ.

RELATED ARTICLES

Related Articles

TRENDING ARTICLES