ನಂಜನಗೂಡು : ಶಾಲೆಗಳು ಕೊರೋನಾ ಮಾಹಾಮಾರಿಯಿಂದ ಕಳೆದ 3 ತಿಂಗಳಿನಿಂದಲೂ ಮುಚ್ಚಿದೆ, ಇದನ್ನೆ ಅಡ್ವಾಂಟೇಜ್ ಆಗಿ ತೆಗೆದುಕೊಂಡು ಕೆಲವರು ಶಾಲೆ ಆವರಣಗಳನ್ನ ಬೇಕಾ ಬಿಟ್ಟಿ ಉಪಯೋಗಿಸಿ ಕೊಳ್ಳುತ್ತಿದ್ದಾರೆ. ನಂಜನಗೂಡಿನ ಕುರಿಹುಂಡಿ ಗ್ರಾಮದ ಸರ್ಕಾರಿ ಶಾಲೆಯ ಜಗುಲಿಯನ್ನು ಕುಡುಕರಿಗೆ ಹಾಟ್ ಸ್ಪಾಟ್ ಮಾಡಿಕೊಂಡಿದ್ಧಾರೆ.ಅಬ್ಕಾರಿ ಇಲಾಖೆಯವ್ರು ಕೇಳಲ್ಲ ಶಿಕ್ಷಣ ಅಧಿಕಾರಿಗಳ ಗೋಜೂ ಇಲ್ಲ ಎಂದು ಇಲ್ಲಿನ ಸಕಾ್ರಿ ಶಾಲೆಯನ್ನ ಬಳಸಿಕೊಳ್ಳುತ್ತಿದ್ದಾರೆ.
ಹೌದು…ಕುರಿಹುಂಡಿ ಗ್ರಾಮದ ಸರ್ಕಾರಿ ಶಾಲೆಯ ದುಃಸ್ಥಿತಿ ಇದು.ರಾತ್ರಿ ಆದ್ರೆ ಸಾಕು ಶಾಲೆಯ ಆವರಣದಲ್ಲಿ ಕುಡುಕರ ಪಾರ್ಟಿ ನಡೆಸುತ್ತಿದ್ದಾರೆ. ಕೊರೊನ ಹಿನ್ನಲೆ ಎಲ್ಲಾ ಶಾಲೆಗಳು ಬಂದ್ ಆಗಿದೆ. ಇದು ಕುಡುಕರಿಗೆ ವರದಾನವಾಗಿದೆ.
ಸರ್ಕಾರಿ ಶಾಲೆ ಜಗುಲಿಯಲ್ಲಿ ಎಣ್ಣೆ ಪಾರ್ಟಿ ನಡೆದ ಕುರುಹಾಗಿ ಮುಂಭಾಗ ರಾಶಿ ರಾಶಿ ಮಧ್ಯದ ಪ್ಯಾಕೆಟ್ ಗಳು ಸಿಕ್ಕಿದೆ.ಇಷ್ಟೆಲ್ಲಾ ನಡೆದ್ರೂ ಶಿಕ್ಷಣ ಇಲಾಖೆ ಕಂಡೂ ಕಾಣದಂತಿದೆ. ಶಾಲೆಯ ಕಿಟಕಿಗಳಲ್ಲೂ ಮಧ್ಯದ ಪ್ಯಾಕೆಟ್ ಗಳು ಪತ್ತೆಯಾಗಿದೆ. ಜ್ಞಾನ ವೃದ್ದಿಸುವ ಕೇಂದ್ರದಲ್ಲಿ ಕುಡುಕರ ಅಜ್ಞಾನದ ಪರಮಾವಧಿ ಎಲ್ಲೆ ಮೀರಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.