Sunday, January 12, 2025

ಜನರ ಪ್ರಾಣಕ್ಕೆ ಸಂಚಕಾರ ಆಗುತ್ತಾ ಬೆಸ್ಕಾಂ- ಮಹಾನಗರ ಪಾಲಿಕೆ ಗೊಂದಲ..!

ತುಮಕೂರು:  ನಗರದಲ್ಲಿ ನಮ್ಮ ವ್ಯಾಪ್ತಿಗೆ ಬರೋದಿಲ್ಲಾ.  ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂತಾ ಬೆಸ್ಕಾಂ ಇಲಾಖೆ ಹಾಗೂ ತುಮಕೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಅಸಡ್ಡೆ ತೋರಿಸ್ತಾ ಇರೋದ್ರಿಂದ ವಿದ್ಯುತ್ ಜಂಕ್ಷನ್ ಬಾಕ್ಸ್ ಗಳಿಂದ ಅಪಾಯಕ್ಕೆ ಆಹ್ವಾನ ನೀಡಿದ್ದಂತಾಗುತ್ತಿದೆ. ಅಪಾಯ ಎದುರಾದ್ರೆ ಯಾರು ಹೊಣೆ ಅಂತಿದ್ದಾರೆ ತುಮಕೂರಿನ ಬಿಜಿ ಪಾಳ್ಯದ ನಾಗರೀಕರು. ರಸ್ತೆಯಲ್ಲಿ ಬೆಸ್ಕಾಂ ಇಲಾಖೆ ವಿದ್ಯುತ್ ಕಂಬಗಳನ್ನ ನೆಟ್ಟಿದೆ ಅದರಲ್ಲಿನ ವೈರ್ ಗಳು ತಳ ಮಟ್ಟದಲ್ಲೇ ಕೈಗೆಟಕುವ ಸ್ಥಿತಿಯಲ್ಲಿದೆ. ಹಲವು ಬಾಕ್ಸ್ ಗಳಿಗೆ ಮುಚ್ಚಳವೇ ಇಲ್ಲ ಮಾತ್ರವಲ್ಲದೆ ಕನೆಕ್ಷನ್ ಕೂಡ ಸರಿಯಾಗಿ ನೀಡಿಲ್ಲ. ಈಗ ಮಳೆಗಾಲ ಆಗಿರೋದ್ರಿಂದ ಅಪಾಯ ತಂದೊಡ್ಡುವ ಆತಂಕವನ್ನ ಈ ವಿದ್ಯುತ್ ಕಂಬಗಳು ಹೆಚ್ಚಿಸಿದೆ. ಈ ಭಾಗದಲ್ಲಿ ಹೆಚ್ಚಾಗಿ ಮಕ್ಕಳು ಓಡಾಡ್ತಾರೆ.  ಸಾರ್ವಜನಿಕರು ಈ ವಿದ್ಯುತ್ ಕಂಬಗಳಿಗೆ ಆಕಸ್ಮಿಕವಾಗಿ ಕೈ ಸೋಕಿದ್ರೆ ಸಾಕು ಪ್ರಾಣಕ್ಕೆ ಸಂಚಾಕಾರ ತರಲಿದೆ. ಬೆಸ್ಕಾಂ ಅಧಿಕಾರಿಗಳನ್ನ ಸಂಪರ್ಕಸಿದ್ರೆ , ಮಹಾನಗರ ಪಾಲಿಕೆಗೆ ತಿಳಿಸಿ ಅಂತಾರೆ.  ಮಹಾ ನಗರ ಪಾಲಿಕೆಗೆ ಮಾಹಿತಿ ನೀಡಿದರೆ ಇದು ನಮಗೆ ಸಂಬಂಧಪಟ್ಟಿದ್ದಲ್ಲ ಅಂತಾರೆ. ರಸ್ತೆಯ ಒಂದು ಭಾಗವು 8ನೇ ವಾರ್ಡಿಗೆ ಮತ್ತೊಂದು ಭಾಗವು 14ನೇ ವಾರ್ಡಿಗೆ ಸಂಬಂಧಪಟ್ಟಿದೆ. ನಗರ ಶಾಸಕರಾಗಲಿ ವಾರ್ಡ್ ಸದಸ್ಯರಾಗಲಿ ಇದರ ಬಗ್ಗೆ ಆದಷ್ಟು ಬೇಗ ಗಮನಹರಿಸಿ ಮುಂದೆ ಆಗುವ ಅನಾಹುತವನ್ನ ತಪ್ಪಿಸುವಂತೆ ಜನತೆ ಮನವಿ ಮಾಡುತ್ತಿದ್ದಾರೆ…

ಹೇಮಂತ್ ಕುಮಾರ್. ಜೆ.ಎಸ್ ಪವರ್ ಟಿವಿ ತುಮಕೂರು.

 

RELATED ARTICLES

Related Articles

TRENDING ARTICLES