ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಇಂದು ಐದು ಮಕ್ಕಳಿಗೆ ಪಾಸಿಟಿವ್ ಬರುವ ಸಾದ್ಯತೆ ಇದ್ದು ಇಂದಿನ ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಸ್ಪೋಟವಾಗಲಿದೆ. ವಿಜಯಪುರ ಜಿಲ್ಲೆಗೆ ಮಹಾರಾಷ್ಟ್ರದಿಂದ ಬಂದಿರುವ ಐದು ಮಕ್ಕಳಲ್ಲಿ ಪಾಸಿಟಿವ್ ಸಾದ್ಯತೆ ಇದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲ ಪಟ್ಟಣದ ಮೂರು ಮಕ್ಕಳು ಹಾಗೂ ಕಡಣಿ ಗ್ರಾಮದ ಎರಡು ಮಕ್ಕಳಲ್ಲಿ ಪಾಸಿಟಿವ್ ಸಾದ್ಯತೆ ಇದೆ. ಐದು ಮಕ್ಕಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಆಲಮೇಲ ಪಟ್ಟಣದ ಕುಂಬಾರ ಗಲ್ಲಿಯಲ್ಲಿ 7 ತಿಂಗಳ, 3 ವರ್ಷದ ಹಾಗೂ 9 ವರ್ಷದ ಮಗುವಿನಲ್ಲಿ ಪಾಸಿಟಿವ್ ಸಾದ್ಯತೆ ಇದೆ. ಹಾಗೂ ಕಡಣಿಯಲ್ಲಿ 6 ತಿಂಗಳ ಮಗು, 5 ವರ್ಷದ ಮಗುವಿಗೆ ಸೊಂಕು ಸಾದ್ಯತೆ ಇದೆ. ಹಾಗೂ ಈ ಎಲ್ಲ ಸೊಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 30 ಜನರಿಗೆ ಸರಕಾರಿ ಕ್ವಾರೆಂಟೈನ್ ಕೇಂದ್ರಕ್ಕೆ ರವಾನಿಸಲಾಗಿದೆ…