ಬೆಂಗಳೂರು: ರಾಜ್ಯದಲ್ಲಿ ಕದಂಬ ಬಾಹು ಚಾಚುತ್ತಿರುವ ಕಿಲ್ಲರ್ ಕೊರೋನಾಗೆ ಇಂದು ಒಂದೇ ದಿನ 84 ಜನ ತುತ್ತಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 1,231 ಕ್ಕೆ ಏರಿಕೆಯಾಗಿದೆ. ಗ್ರೀನ್ ಝೋನ್ ಆಗಿದ್ದ ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಗ್ರೀನ್ ಝೋನ್ನಿಂದ ರೆಡ್ ಝೋನ್ನತ್ತ ಸಾಗುತ್ತಿದೆ.
ರಾಜ್ಯದಲ್ಲಿ ಇಂದು ಪತ್ತೆಯಾದ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರಲ್ಲಿ 18 ಜನರಿಗೆ ಸೋಂಕು ತಗುಲಿದೆ. ಮಂಡ್ಯದಲ್ಲಿ 17 ಜನರಲ್ಲಿ ಸೋಂಕು ದೃಢಪಟ್ಟಿದೆ.ಇನ್ನುಳಿದಂತೆ ರಾಯಚೂರು 6, ಕೊಪ್ಪಳ 3, ದಾವಣಗೆರೆ 1, ಕೊಡಗು 1, ಯಾದಗಿರಿಯಲ್ಲಿ 5, ಬಳ್ಳಾರಿ 1, ಮೈಸೂರು 1, ಬೆಳಗಾವಿ 2, ಹಾಸನ 4, ಕಲಬುರಗಿ 6, ಗದಗ 5, ವಿಜಯಪುರ 5, ಉತ್ತರ ಕನ್ನಡ 8 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಬೆಂಗಳೂರಲ್ಲಿ ಪೇಷೆಂಟ್ ನಂಬರ್ 653 ಒಬ್ಬನ ದ್ವಿತೀಯ ಸಂಪರ್ಕದಿಂದಲೇ ಒಟ್ಟು 16 ಜನ ರಿಗೆ ಸೋಂಕು ಹರಡಿದೆ. ಇನ್ನುಳಿದಂತೆ ಇಬ್ಬರಲ್ಲಿ ಒಬ್ಬನಿಗೆ ಅಂತರ್ ರಾಜ್ಯ ಚೆನ್ನೈಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ತಗುಲಿದೆ. ಇನ್ನೊಬ್ಬ ವ್ಯಕ್ತಿ ನೆಲಮಂಗಲದ ದಾಬಾಸ್ ಪೇಟೆಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಬಂದಿರುತ್ತದೆ.
ಇನ್ನುಳಿದಂತೆ ಇತರ ಜಿಲ್ಲೆಗಳಲ್ಲಿ ಕಂಡುಬಂದ ಸೋಂಕಿತರೆಲ್ಲರೂ ಮುಂಬೈಗೆ ತೆರಳಿರುವುದರಿಂದ ಸೋಂಕು ಬಂದಿರುತ್ತದೆ. ಮುಂಬೈಗೆ ತೆರಳಿದವರಲ್ಲಿ ಮಂಡ್ಯದಲ್ಲಿ 17 ಜನರಿಗೆ ಸೋಂಕು ಹರಡಿದೆ. ಹಾಸನದಲ್ಲಿ ನಾಲ್ಕು, ರಾಯಚೂರಿನಲ್ಲಿ ಪತ್ತೆಯಾಗಿರುವ ಆರು ಕೇಸ್ಗಳು ಕೂಡಾ ಮುಂಬೈ ಪ್ರಯಾಣದಿಂದ ಬಂದಿದೆ. ಇನ್ನು ಕೊಪ್ಪಳದಲ್ಲಿ ಒಂದು ಕೇಸ್, ವಿಜಯಪುರದಲ್ಲಿ 5, ಕಲಬುರಗಿ 6 ಕೇಸ್ಗಳು, ಯಾದಗಿರಿಯಲ್ಲಿ 5, ಉತ್ತರ ಕನ್ನಡದಲ್ಲಿ 7 ಕೇಸ್ಗಳು ಪತ್ತೆ, ಕೊಡಗು ಹಾಗೂ ಮೈಸೂರು ತಲಾ ಒಂದು ಕೇಸ್, ಬೆಳಗಾವಿಯಲ್ಲಿ ಒಬ್ಬರಲ್ಲಿ ಕೊರೋನಾ ಪತ್ತೆಯಾಗಿದೆ.
ಕೊಪ್ಪಳದಲ್ಲಿ ಬಂದಿರುವ ಕೇಸ್ನಲ್ಲಿ ಇಬ್ಬರು ಮಹಾರಾಷ್ಟ್ರದ ರಾಯ್ಘಡ್ಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ತಗುಲಿದ್ದು, ಇನ್ನೊಬ್ಬ ವ್ಯಕ್ತಿ ಚೆನ್ನೈಗೆ ತೆರಳಿದ್ದರಿಂದ ಸೋಂಕು ಬಂದಿದೆ. ಗದಗದಲ್ಲಿ ಪತ್ತೆಯಾಗಿರುವ 5 ಕೇಸ್ಗಳಲ್ಲಿ ಒಬ್ಬರು ಚೆನ್ನೈಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ತಗುಲಿದೆ. ಇನ್ನು ಪೇಷೆಂಟ್ 913 ವ್ಯಕ್ತಿಯಿಂದ ಇಬ್ಬರಿಗೆ ಸೊಂಕು ತಗುಲಿದೆ. ಗದಗ ಜಿಲ್ಲೆಯ ಕಂಟೈನ್ಮೆಂಟ್ಝೋನ್ಗೆ ತೆರಳಿದ್ದರಿಂದ ಸೋಂಕು ಹರಡಿದೆ. ಬಳ್ಳಾರಿಯಲ್ಲಿ ಒಬ್ಬ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದ್ದು, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ದಾವಣಗೆರೆಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಮಹಾರಾಷ್ಟ್ರದ ಸೊಲಾಪುರದಲ್ಲಿ ಪ್ರಯಾಣ ಬೆಳೆಸಿದ್ದರಿಂದ ಸೋಂಕು ತಗುಲಿದೆ. ಬೀದರ್ನಲ್ಲಿ ಒಬ್ಬರಿಗೆ ಸೋಂಕು ಹರಡಿದ್ದು, ಪೇಷೆಂಟ್ 939 ವ್ಯಕ್ತಿಯಿಂದ ಸೋಂಕು ಹರಡಿದೆ. ಉತ್ತರ ಕನ್ನಡದಲ್ಲಿ ಒಬ್ಬರಿಗೆ ಪೇಷೆಂಟ್ 659 ರ ಸೋಂಕಿತನಿಂದ ಸೋಂಕು ಬಂದಿರುತ್ತದೆ. ಬೆಳಗಾವಿಯಲ್ಲಿ ಒಬ್ಬರಿಗೆ ಪೇಷೆಂಟ್ 575 ರ ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿದೆ.