Friday, May 17, 2024

ಚೆನ್ನೈ Vs ಲಕ್ನೋ ಕಾಳಗ : CSK ವಿರುದ್ಧ ಅಬ್ಬರಿಸುತ್ತಾರಾ ಕನ್ನಡಿಗ ರಾಹುಲ್?

ಬೆಂಗಳೂರು : ಐಪಿಎಲ್​ನ 34ನೇ ಪಂದ್ಯದಲ್ಲಿ ಇಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಬಹುತೇಕ ಅನುಭವಿ ಹಾಗೂ ಹಿರಿಯ ಆಟಗಾರರಿಂದಲೇ ಕೂಡಿರುವ ಚೆನ್ನೈ ತಂಡವನ್ನು ತವರು ಅಂಗಳದಲ್ಲೇ ಬಗ್ಗುಬಡಿಯಲು ರಾಹುಲ್ ಪಡೆ ಸಜ್ಜಾಗಿದೆ.

ಐಪಿಎಲ್​ನಲ್ಲಿ ಉಭಯ ತಂಡಗಳು ಈವರೆಗೆ 3 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಲಕ್ನೋ ಸೂಪರ್‌ ಜೈಂಟ್ಸ್‌  ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಲಾ ಒಂದು ಪಂದ್ಯ ಗೆದ್ದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿದೆ.

ಪ್ರಸಕ್ತ ಆವೃತ್ತಿಯಲ್ಲಿ ಚೆನ್ನೈ 6 ಪಂಡ್ಯಗಳನ್ನು ಆಡಿದ್ದು, 4 ಪಂದ್ಯ 2 ಪಂದ್ಯ ಸೋತಿದೆ. ಲಕ್ನೋ 6 ಪಂದ್ಯ ಆಡಿದ್ದು 3 ಪಂದ್ಯ ಗೆದ್ದು 3 ಪಂದ್ಯ ಸೋತಿದೆ. ಚೆನ್ನೈ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರೆ, ಲಕ್ನೋ 5ನೇ ಸ್ಥಾನದಲ್ಲಿದೆ.

ಲಕ್ನೋ ಪಿಚ್‌ ಯಾರಿಗೆ ಸಹಕಾರಿ?

  • ಏಕನಾ ಸ್ಟೇಡಿಯಂ ಪಿಚ್‌ ಬ್ಯಾಟರ್‌ಗಳಿಗೆ ಸಹಕಾರಿ
  • ಜೊತೆಗೆ ಸ್ಪಿನ್ನರ್‌ಗಳಿಗೂ ಪಿಚ್‌ ಅನುಕೂಲವಾಗಲಿದೆ
  • ಚೇಸ್‌ ಮಾಡಿರೋ ತಂಡವೇ ಹೆಚ್ಚು ಬಾರಿ ಗೆದ್ದಿದೆ
  • ಬ್ಯಾಟರ್‌ಗಳು ಲಯ ಕಂಡುಕೊಂಡರೆ ಬಿಗ್‌ ಸ್ಕೋರ್

ಚೆನ್ನೈ ಸೂಪರ್ ಕಿಂಗ್ಸ್

ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಎಂ.ಎಸ್. ಧೋನಿ (ವಿ.ಕೀ), ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಮುಸ್ತಾಫಿಜುರ್ ರೆಹಮಾನ್, ಮಥೀಶ ಪತಿರಾಣ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ

ಲಕ್ನೋ ಸೂಪರ್‌ ಜೈಂಟ್ಸ್‌

ಕೆ.ಎಲ್.ರಾಹುಲ್ (ನಾಯಕ / ವಿ.ಕೀ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ದೇವದತ್ ಪಡಿಕ್ಕಲ್, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್

RELATED ARTICLES

Related Articles

TRENDING ARTICLES