Monday, May 20, 2024

ಸ್ಕೈ ಡೈವಿಂಗ್ ಮೂಲಕ ಮೋದಿ ಅಭಿಮಾನ ಪ್ರದರ್ಶನ

ವಿಜಯಪುರ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಿಎಂ ನರೇಂದ್ರ ಮೋದಿ ಮತ್ತೆ ಪ್ರಧಾನಿ ಪಟ್ಟಕ್ಕೆ ಏರಬೇಕು ಎಂದು ಅಭಿಮಾನಿಯೊಬ್ಬರು ಸ್ಕೈ ಡೈವಿಂಗ್​ ಮೂಲಕ ಅಭಿಮಾನ ಪ್ರದರ್ಶನ ಮಾಡಿದ್ದಾರೆ.

ಸ್ಕೈ ಡೈವಿಂಗ್ ಮೂಲಕ 13 ಸಾವಿರ ಅಡಿಗಳ ಮೇಲಿಂದ ಔರ್​ ಏಕ್​ ಬಾರ್​ ಮೋದಿ ಸರ್ಕಾರ್ ಎಂದು ಹಾರುವ ಮೂಲಕ ಅಭಿಮಾನ ಪ್ರದರ್ಶಿಸಿದ್ದಾರೆ. ನಮೋ ಸ್ಕೈ ಡೈವರ್ಸ್​ ಎಂಬ ನಾಲ್ವರು ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ವಿಭಿನ್ನ ಯತ್ನ ನಡೆಸಿದ್ದಾರೆ.

ಇದನ್ನೂ ಓದಿ: ಏ.14ರಂದು ರಾಜ್ಯಕ್ಕೆ ಮತ್ತೆ ಮೋದಿ ಬರುತ್ತಾರೆ : ಸಿ.ಟಿ. ರವಿ

ಬ್ಯಾಂಕಾಕ್​ ನ ಖೋಯಾಯ್​ ಎಂಬ ಪ್ರದೇಶದಿಂದ ವಿಜಯಪುರದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ನೇತೃತ್ವದಲ್ಲಿ ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾನಶೂ ಸಾಬಳೆ ತಂಡವು 13 ಸಾವಿರ ಅಡಿಗಳ ಎತ್ತರದಿಂದ ಮೋದಿ ದೇಶಕ್ಕೆ ಮಾತ್ರವಲ್ಲ ಇಡಿ ಜಗತ್ತಿಗೆ ಮಾದರಿಯಾಗಿದ್ದಾರೆ. ಹಾಗಾಗಿ ಆಗಸದಲ್ಲೂ ಮೋದಿಯವರ ಹೆಸರು ರಾರಾಜಿಸಬೇಕು ಎಂದು ವಿಭಿನ್ನ ಪ್ರಯತ್ನ ಮಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ.

RELATED ARTICLES

Related Articles

TRENDING ARTICLES