ಬೆಂಗಳೂರು: ಪಾದರಾಯನಪುರದಲ್ಲಿ ಗಲಭೆ ಸಂಬಂಧ ಶಾಸಕ ಜಮೀರ್ ಅಹ್ಮದ್ ನಿಡಿರುವ ಹೇಳಿಕೆ ವಿರುದ್ಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀರ್ ಅಹ್ಮದ್ ಯಾರು ನಮಗೆ ಹೇಳೊದಿಕ್ಕೆ? ನಮ್ಮ ಕೆಲಸ ಮಾಡಲು ಅವರ ಅಪ್ಪಣೆ ಪಡೆಯಬೇಕಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು,‘ಅವರು ಯಾರು ಕೇಳೊಕೆ? ಜಮೀರ್ಗೂ ಇದಕ್ಕೂ ಏನು ಸಂಬಂಧ? ಅವರ ಹೇಳಿಕೆಯಿಂದ ನಾವೇನು ತಿಳ್ಕೋಬೇಕು? ಹಾಗಾದ್ರೆ ಅವರೇ ಈ ಘಟನೆ ಹಿಂದೆ ಇದ್ದಾರಾ ಎಂದು ಭಾವಿಸಬೇಕಾ?‘ಎಂದು ಕೇಳಿದ್ದಾರೆ. ಶಾಸಕರಾಗಿ ಅವರೇ ಜನರಿಗೆ ಜಮೀರ್ ತಿಳುವಳಿಕೆ ಹೇಳಬೇಕು. ಅದರ ಬದಲು ಸಮರ್ಥನೆ ಮಾಡಿಕೊಳ್ಳೋದು ಸರಿಯಲ್ಲ. ಇದು ಜಮೀರ್ ಅವರ ಬೇಜವಾಬ್ದಾರಿಯ ಪರಮಾವಧಿ‘ ಎಂದು ಹೇಳಿದ್ದಾರೆ.