Friday, May 17, 2024

ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ : ಇಬ್ಬರು ದುಬಾರಿ ಆಟಗಾರರ ಮೇಲೆ ಅಭಿಮಾನಿಗಳ ಕಣ್ಣು

ಬೆಂಗಳೂರು : ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಮಿನ್ಸ್​ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಐಪಿಎಲ್​ 17ನೇ ಆವೃತ್ತಿತ ಮೂರನೇ ಪಂದ್ಯ ನಡೆಯುತ್ತಿದೆ. ಕೆಕೆಆರ್ ತಂಡ ಮೊದಲು ಬ್ಯಾಟ್ ಮಾಡಲಿದೆ.ಈ ಪಂದ್ಯದಲ್ಲಿ ಇಬ್ಬರು ದುಬಾರಿ ಆಟಗಾರರಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ ಮುಖಾಮುಖಿಯಾಗಿದ್ದಾರೆ.

ಹೈದರಾಬಾದ್ ತಂಡ ಪ್ಯಾಟ್ ಕಮಿನ್ಸ್​ ಅವರನ್ನು 20.50 ಕೋಟಿಗೆ ಖರೀದಿಸಿದೆ. ಅಲ್ಲದೆ, ನಾಯಕತ್ವದ ಜವಾಬ್ದಾರಿ ನೀಡಿದೆ. ದಾಖಲೆಯ 24.75 ಕೋಟಿ ನೀಡಿ ಕೆಕೆಆರ್ ತಂಡ ಮಿಚೆಲ್ ಸ್ಟಾರ್ಕ್​ ಅವರನ್ನು ಖರೀದಿಸಿದೆ. ಸ್ಟಾರ್ಕ್ ಒಂದೇ ಬಾಲ್ ಬೌಲ್ ಮಾಡಿದರೆ ಸುಮಾರು 7.36 ಲಕ್ಷ ರೂ. ಪಡೆಯಲಿದ್ದಾರೆ. ಹೀಗಾಗಿ, ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಇಬ್ಬರು ಆಟಗಾರರ ಮೇಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್

ಶ್ರೇಯಸ್ ಅಯ್ಯರ್ (ನಾಯಕ), ಫಿಲಿಪ್ ಸಾಲ್ಟ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಸನ್‌ರೈಸರ್ಸ್ ಹೈದರಾಬಾದ್

ಪ್ಯಾಟ್ ಕಮಿನ್ಸ್(ನಾಯಕ), ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಯಾನ್ಸನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ ನಟರಾಜನ್.

RELATED ARTICLES

Related Articles

TRENDING ARTICLES