21 ದಿನಗಳ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಜನಸಾಮಾನ್ಯರ ಜೀವನ ಮಾತ್ರವಲ್ಲದೆ ಮೂಕ ಪ್ರಾಣಿಗಳ ಜೀವನವೂ ಕಷ್ಟವಾಗಿದೆ. ಹೌದು, ಲಾಕ್‌ಡೌನ್ ಎಫೆಕ್ಟ್‌ಗೆ ಮೇವಿಲ್ಲದೆ ಮೂಕಪ್ರಾಣಿಗಳ ರೋದನೆ ಮುಗಿಲು ಮುಟ್ಟಿದೆ.
ಲಾಕ್‌ಡೌನ್ ಹಿನ್ನೆಲೆ ಮೇವು ಪೂರೈಕೆ ಸ್ಥಗಿತವಾಗಿದೆ. ಬೆಂಗಳೂರಿನ ಮೂಕಪ್ರಾಣಿಗಳಿಗೆ ಬೇರೆ ಬೇರೆ ಜಿಲ್ಲೆಗಳಿಂದ ಆಹಾರ ತರಿಸಿಕೊಳ್ಳಲಾಗುತ್ತಿತ್ತು. ಆದ್ರೆ ಈಗ ಮೇವು ಪೂರೈಸುವ ವಾಹನಗಳನ್ನು ಪೊಲೀಸರು ಬಿಡದಿರುವ ಹಿನ್ನೆಲೆ, ಆಹಾರವಿಲ್ಲದೆ ಮೂಕಪ್ರಾಣಿಗಳು ರೋದನೆಯನ್ನ ಅನುಭವಿಸುತ್ತಿವೆ. ಜೀವ ಉಳಿಸಿಕೊಳ್ಳಲು ಜಾನುವಾರು ಪರದಾಡುತ್ತಿವೆ.
ಮೇವು ತರಲು ಹೊರಗೆಲ್ಲೂ ಹೋಗಲು ಜಾನುವಾರು ಮಾಲೀಕರಿಗೆ ಪೊಲೀಸರು ಅವಕಾಶ ನೀಡುತ್ತಿಲ್ಲ.
ಆದ್ದರಿಂದ ಮಾಲೀಕರು ಮನೆಯಲ್ಲೇ ಉಳಿದಿದ್ದು, ಏನು ಮಾಡಬೇಕೆಂದು ತೋಚದೆ ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳಲ್ಲಿ ಉಳಿಯುವ ಆಹಾರ ಕೆಲವು ಪ್ರಾಣಿಗಳಿಗೆ ವರದಾನವಾಗಿತ್ತು. ಆದರೆ ಈಗ ಲಾಕ್‌ಡೌನ್ ಹಿನ್ನೆಲೆ ಅದೂ ಕೂಡ ಸಿಗದೆ, ಕುಡಿಯಲು ನೀರೂ ಇಲ್ಲದೆ ಪ್ರಾಣಿ-ಪಕ್ಷಿಗಳು ಹೆಣಗಾಡುತ್ತಿವೆ.