ನವದೆಹಲಿ: ವ್ಯಾಪಕ ಭ್ರಷ್ಟಾಚಾರದ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ನಿವಾಸ, ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ಗುರುವಾರ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.
ಇಂದು ಬೆಳಗ್ಗೆ ನೂರಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಿರು ಹೈಡೋ ಎಲೆಕ್ಟ್ರಿಕ್ ಪವರ್ ಯೋಜನೆಯ ಸಿವಿಲ್ ಕಾಮಗಾರಿಗಳನ್ನು ನೀಡುವಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಸತ್ಯಪಾಲ್ ಮಲಿಕ್ ನಿವಾಸ, ಕಚೇರಿ ಸೇರಿದಂತೆ ವಿವಿಧ ನಗರಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ದೇವಾಲಯಗಳ ಆದಾಯದ ಮೇಲೆ ಸರ್ಕಾರದ ಕಣ್ಣು: ವಿಜಯೇಂದ್ರ ವಾಗ್ದಾಳಿ!
ಕಿರು ಹೈಡೋ ಎಲೆಕ್ನಿಕ್ ಪವರ್ ಪ್ರಾಜೆಕ್ಟ್ ₹2,220 ಕೋಟಿ ಮೌಲ್ಯದ ಯೋಜನೆಯಾಗಿದೆ. ಕಾಮಗಾರಿ ಗುತ್ತಿಗೆ ನೀಡುವಾಗ ಅಕ್ರಮಗಳು ನಡೆದಿವೆ ಎಂದು ಸತ್ಯಪಾಲ್ ಮಲಿಕ್ ಸೇರಿದಂತೆ ಇತರೆ ಐವರ ವಿರುದ್ಧ ಸಿಬಿಐ ಅಧಿಕಾರಿಗಳು 2022ರಲ್ಲಿ ದೂರು ದಾಖಲಿಸಿದ್ದರು.