Friday, April 11, 2025

ನೈಟಿ ಧರಿಸಿ ಶೂ, ಚಪ್ಪಲಿ ಕಳ್ಳತನ ಮಾಡುವ ವಿಚಿತ್ರ ಕಳ್ಳ

ಬೆಂಗಳೂರು:ಸಿಲಿಕಾನ್‌ ಸಿಟಿಯಲ್ಲಿ ರಾತ್ರಿ ವೇಳೆ ನೈಟಿ ಹಾಕಿಕೊಂಡು ಅಪಾರ್ಟ್‌ಮೆಂಟ್‌ಗಳಲ್ಲಿ ಶೂ ಮತ್ತು ಚಪ್ಪಲಿಯನ್ನು ಕಳ್ಳನೊಬ್ಬ ಕದಿಯುತ್ತಿದ್ದಾನೆ.

ಹೌದು, ನಗರದಲ್ಲಿ ಮತ್ತೊಬ್ಬ ವಿಚಿತ್ರ ಕಳ್ಳ ಪ್ರತ್ಯಕ್ಷನಾಗಿದ್ದಾನೆ. ಈತ ನೈಟಿ ಧರಿಸಿ ಬಂದು ಅಪಾರ್ಟ್ಮೆಂಟ್‌ಗೆ ನುಗ್ಗಿ ಬೆಲೆಬಾಳುವ ಶೂಗಳನ್ನು ಕದಿಯುತ್ತಿರುವುದು ಕಂಡುಬಂದಿದೆ.

ಸಿಸಿಟಿವಿಯಲ್ಲಿ ಕಳ್ಳತನ ಮಾಡುವ ದೃಶ್ಯ ಸರೆ

ಮನೆ ಮುಂದೆ ಇರುವ ಶೂಗಳನ್ನು ಕದಿಯಲು ನೈಟಿ ಹಾಕಿಕೊಂಡು ಬಂದ ಈ ಕಳ್ಳ ಶೂಗಳನ್ನು ಕದ್ದು ಕಾಂಪೌಂಡ್ ಹಾರಿ ಪರಾರಿಯಾಗುತ್ತಿರುವುದು ಸಿಸಿಟಿವಿ ಫೂಟೇಜ್‌ನಲ್ಲಿ ಕಂಡುಬಂದಿದೆ. ಸಿಸಿಟಿವಿಯಲ್ಲಿ ಕಾಣಿಸಿಕೊಳ್ಳುವುದನ್ನು ಅವಾಯ್ಡ್ ಮಾಡಲು ನೈಟಿ ಹಾಕಿ ಈ ಕುಕೃತ್ಯ ಎಸಗುತ್ತಿರಬಹುದು ಎಂದು ಊಹಿಸಲಾಗಿದೆ.

ಬೆಲೆ ಬಾಳುವ ಶೂಗಳನ್ನು ಕದ್ದು ನೈಟಿ ಕಳ್ಳ ಪರಾರಿಯಾಗುತ್ತಿರುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಬೆಂಗಳೂರಿನ ನಾಗರಿಕರೊಬ್ಬರು, ʼಬೆಂಗಳೂರು ಎಷ್ಟು ಸೇಫ್ʼ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES