ಪಂಜಾಬ್ : ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮತದಾನದ ಕುರಿತು ಜಾಗೃತಿ ಮೂಡಿಸಲು ಮತ್ತು ಮತದಾನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಚುನಾವಣಾ ಅಧಿಕಾರಿಗಳು ಸೆಲೆಬ್ರಿಟಿಗಳ ಹಿಂದೆ ಬಿದ್ದಿದ್ದಾರೆ. ಪಂಜಾಬ್ ರಾಜ್ಯವು ತಮ್ಮ ರಾಜ್ಯದಲ್ಲಿ ಮತದಾರರನ್ನು ಆಕರ್ಶಿಸಲು ಟೀಂ ಇಂಡಿಯಾದ ಆಟಗಾರರಾರರೊಬ್ಬರನ್ನು ಸ್ಟೇಟ್ ಐಕಾನ್ ಎಂದು ಘೋಷಿಸಿದೆ.
ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಅವರನ್ನು ಪಂಜಾಬ್ ರಾಜ್ಯವು ತಮ್ಮ ಸ್ಟೇಟ್ ಐಕಾನ್ ಎಂದು ಫೆ.19 ರಂದು ಘೋಷಣೆ ಮಾಡಿದೆ. ಪಂಜಾಬ್ ಮೂಲದ ಗಿಲ್ ರ ಆಟಕ್ಕೆ ಪಂಜಾಬ್ ಸೇರಿದಂತೆ ಭಾರತದ ಯುವಪೀಳಿಗೆ ಹೆಚ್ಚ ಇಷ್ಟ ಪಡುತ್ತದೆ.
ಇದನ್ನೂ ಓದಿ: 49 ಹೊಸ ತಾಲೂಕು ಕಚೇರಿಗಳ ನಿರ್ಮಾಣಕ್ಕೆ ಕ್ರಮ: ಸಚಿವ ಕೃಷ್ಣಭೈರೇಗೌಡ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಮತದಾರರನ್ನು ಉತ್ತೇಜಿಸುವ ಮೂಲಕ ಶುಭ್ಮನ್ ಗಿಲ್ ಪಂಜಾಬ್ ರಾಜ್ಯವು ಶೇ.70ಕ್ಕಿಂತ ಹೆಚ್ಚು ಮತದಾನದ ಪ್ರಮಾಣವನ್ನು ತಲುಪಲು ಸಹಾಯ ಮಾಡುತ್ತದೆ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.