Tuesday, November 5, 2024

ರಾಮನನ್ನು ಬೀದಿಗೆ ತಂದು ವೋಟು ಕೇಳುತ್ತಿದ್ದಾರೆ : ಮಧು ಬಂಗಾರಪ್ಪ

ಶಿವಮೊಗ್ಗ : ಬಿಜೆಪಿಯವರಿಗೆ ದುರ್ಬುದ್ದಿ ಜಾಸ್ತಿ. ರಾಮನನ್ನು ಬೀದಿಗೆ ತಂದು ವೋಟು ಕೇಳುತ್ತಿದ್ದಾರೆ ಎಂದು ಬಿಜೆಪಿಗರ ವಿರುದ್ಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ತೆರಿಗೆ ಹಿಂದೂಗಳಿಗೆ ಕೋಡಬೇಕಂತೆ ಎಂದು ಟೀಕಿಸಿದರು.

ಮುಸ್ಲಿಮರು, ಬಡವರು ತೆರಿಗೆ ಕಟ್ಟಿಲ್ವಾ..? ನಾವೆಲ್ಲ ಭಾರತಾಂಬೆಯ ಮಕ್ಕಳು ಅಲ್ವಾ..? ವಿರೋಧ ಪಕ್ಷದವರಿಗೆ ಜನರು ಉತ್ತರ ಕೊಡುತ್ತಾರೆ. ವಿರೋಧ ಪಕ್ಷದ ಟೀಕೆ ಟಿಪ್ಪಣಿ ನಮಗೆ ಕೇಳಬೇಡಿ ಎಂದು ತಿಳಿಸಿದರು.

ಟೀಕೆಗಳಿಗೆ ಸಮಾವೇಶ ಉತ್ತರ ಆಗುತ್ತೆ

ಇವತ್ತು ಶಿಕಾರಿಪುರ ಸೇರಿ ರಾಜ್ಯದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಟೀಕಾ ಟಿಪ್ಪಣಿಗಳಿಗೆ ಈ ಸಮಾವೇಶ ಉತ್ತರ ಆಗುತ್ತೆ. ಧೈರ್ಯವಾಗಿ ಜನರ ಬಳಿ ಬಂದು ಆಶೀರ್ವಾದ ಕೇಳುತ್ತೇವೆ. ಇನ್ನೂ ಹೆಚ್ಚಿನ ಅನುದಾನ ಜಿಲ್ಲೆಗೆ ತರುತ್ತೇನೆ. ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದವರು ಬರಬೇಕಿತ್ತು. ಇದು ಪಕ್ಷದ ಕಾರ್ಯಕ್ರಮ ಅಲ್ಲ‌ ಸರ್ಕಾರದ ಕಾರ್ಯಕ್ರಮ ಎಂದು ಹೇಳಿದರು.

ಜಾತಿ, ಧರ್ಮ ನೋಡಿ ಗ್ಯಾರಂಟಿ ಕೊಡಲ್ಲ

ಜನರೇ ಬಂದು ನಮಗೆ ಯೋಜನೆ ತಲುಪುತ್ತಿದೆ ಅನ್ನುತ್ತಿದ್ದಾರೆ. ಪಕ್ಷ, ಜಾತಿ, ಧರ್ಮ ನೋಡಿ ನಾವು ಯೋಜನೆ ಕೊಡಲ್ಲ. ನುಡಿದಂತೆ ನಡೆದ ಸರ್ಕಾರಕ್ಕೆ ಜನ ಬೆಂಬಲ ಕೇಳುತ್ತಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.

RELATED ARTICLES

Related Articles

TRENDING ARTICLES