ಬೆಂಗಳೂರು : ಎಸ್. ಮುನಿಸ್ವಾಮಿ ಸಂಸತ್ ಸದಸ್ಯರಾಗಲು (ಸಂಸದ) ನಾಲಾಯಕ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಬಿಜೆಪಿ ಸಂಸದ ಎಸ್. ಮುನಿಸ್ವಾಮಿ ಸಂಸತ್ತಿನಲ್ಲಿ ಎಂದಾದರೂ ಕರ್ನಾಟಕದ ಪರ ಬಾಯಿ ಬಿಟ್ಟಿದ್ದಾರಾ? ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರವು ನ್ಯಾಯಯುತವಾಗಿ ಕೊಡಬೇಕಿದ್ದ ಪಾಲನ್ನೂ ಇವರಿಗೆ ಕೇಳಲು ಆಗಲಿಲ್ಲ. 15ನೇ ಹಣಕಾಸು ಆಯೋಗವು 5,495 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಬೇಕು ಎಂದು ಶಿಫಾರಸು ಮಾಡಿದೆ. ಇದನ್ನು ಕೇಳಿ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದೆ. ಆದರೆ, ಇದನ್ನು ಪಡೆಯುವ ಗೋಜಿಗೆ ಹೋಗಲೇ ಇಲ್ಲ ಇವರು ಎಂದು ಕಿಡಿಕಾರಿದರು.
ನವ ನಿರ್ಮಾಣದ ಗ್ಯಾರಂಟಿ ಬಜೆಟ್
ನಾವು ಸರ್ವರನ್ನೂ ಒಳಗೊಂಡ, ಸರ್ವತೋಮುಖ ಪ್ರಗತಿಯ ಕರ್ನಾಟಕ ನವ ನಿರ್ಮಾಣದ ಗ್ಯಾರಂಟಿ ಬಜೆಟನ್ನು ರಾಜ್ಯದ ಸಮಸ್ತ ಜನರಿಗೆ ಅರ್ಪಿಸುತ್ತಿದ್ದೇವೆ. ಅವಕಾಶ ವಂಚಿತರಿಗೆ ಘನತೆಯ ಬದುಕು ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.