ತುಮಕೂರು : ಕಾಂಗ್ರೆಸ್‌ನವರು 90% ಎಸ್.ಪಿ. ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಬಾರದು ಎಂದು ನಿರ್ಧಾರ ಮಾಡಿದ್ದಾರೆ. 10% ಟಿಕೆಟ್ ಕೊಡಬೇಕು ಅಂತ ಇದ್ದಾರೆ ಎಂದು ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುದ್ದಹನುಮೇಗೌಡರು 90% ಕಾಂಗ್ರೆಸ್ ನತ್ತ ಹೋಗಿದ್ದಾರೆ. 10% ಬಿಜೆಪಿಯಲ್ಲಿದ್ದಾರೆ. ಪಾರ್ಟಿ ಸರ್ವೆ ಮಾಡಿಸಿ ಟಿಕೆಟ್ ಕೊಡುತ್ತದೆ ಎಂದು ತಿಳಿಸಿದರು.
ಅಮಿತ್ ಶಾ ಹೇಳಿದ್ದಾರೆ. 28 ಕ್ಷೇತ್ರದಲ್ಲೂ ಸ್ಟ್ರಾಂಗ್ ಅಭ್ಯರ್ಥಿಗಳನ್ನು ಹಾಕುತ್ತೇವೆ ಅಂತ. ಗೆಲ್ಲುವಂತಹ ಅಭ್ಯರ್ಥಿಗಳಿಗೇ ಅವಕಾಶ ಕೊಡ್ತಾರೆ ಅಂತ ನಂಬಿಕೆಯಿದೆ. ಮಾಧುಸ್ವಾಮಿ ಮಾತನಾಡಿರುವುದು ಸರಿಯಲ್ಲ. ಬೇರೆ ಬೇರೆ ಮಾತುಗಳನ್ನ ಯಾರು ಮಾತನಾಡಬಾರದು. ಹೈಕಮಾಂಡ್ ಮಾಧುಸ್ವಾಮಿ, ಮುದ್ದಹನುಮೇಗೌಡ ಯಾರಿಗೆ ಹೇಳಿದ್ರು ಮಾಡ್ತೀವಿ ಎಂದು ಹೇಳಿದರು.
ಮಾಧುಸ್ವಾಮಿ ಅವರೇನು ರಾಜ್ಯಾಧ್ಯಕ್ಷರಲ್ಲ
ಹೊರಗಿನವರು, ಒಳಗಿನವರು ಅಂತ ಮಾತನಡುವ ಹಕ್ಕು ಯಾರಿಗೂ ಇಲ್ಲ. ಮಾಧುಸ್ವಾಮಿಗೆ ಗೊಂದಲ ಇಡುವಂತೆ ಯಾರು ಹೇಳಿಲ್ಲ. ಅವರೇನು ರಾಜ್ಯಾಧ್ಯಕ್ಷರಲ್ಲ, ಅವರ ಅಭಿಪ್ರಾಯ ಹೇಳಿರಬಹುದು ಅಷ್ಟೇ. ಪಾರ್ಟಿ ಸುಪ್ರೀಂ, ಮಾಧುಸ್ವಾಮಿ ಎಲ್ಲಿ ಇದ್ದರು? ಹೋದ ಸಲ ಕೆಜೆಪಿಗೆ ಬಂದ್ರು, ಬಿಜೆಪಿಯಲ್ಲಿ ಪಾರ್ಟಿ ಟಿಕೆಟ್ ಕೊಡ್ತು. ಅದು ಕಿರಣ್ ಕುಮಾರ್ ಅವರನ್ನು ಕಳೆದುಕೊಂಡು ಟಿಕೆಟ್ ಕೊಟ್ರು. ಪಕ್ಷ ನಿರ್ಧಾರ ಮಾಡಿದ್ದಕ್ಕೆ ಸಚಿವರಾದರು. ಒಡಕು ಮಾತುಗಳನ್ನಾಡಬಾರದು ಎಂದು ಕುಟುಕಿದರು.
ಮಾಧುಸ್ವಾಮಿ, ಸಿ.ಟಿ ರವಿ, ಸೋಮಣ್ಣ ಸೋತಿದ್ದಾರೆ
ವಿ. ಸೋಮಣ್ಣ ನಮ್ಮ ಪಾರ್ಟಿಯವರು ಅವರ ಜೊತೆಗೆ ಮದುವೆಗೆ ಹೋಗಿದ್ದರಲ್ಲಿ ತಪ್ಪೇನು? ಪಾರ್ಲಿಮೆಂಟ್ ಟಿಕೆಟ್ ಕೊಡಿ ಅಂತ ನಾನು ಎಲ್ಲಿಯೂ ಹೇಳಿಲ್ಲ. ಟಿಕೆಟ್ ವಿಷಯದಲ್ಲಿ ಯಾವುದೇ ಒಡಕಿಲ್ಲ. ಸೋತವರಿಗೆ ಟಿಕೆಟ್ ಕೊಡ್ತಾರಾ? ಇಲ್ವಾ? ಅಂತ ಪಾರ್ಟಿಯಲ್ಲಿ ಚರ್ಚೆ ಆಗ್ತಿದೆ. ಮಾಧುಸ್ವಾಮಿ, ಸಿ.ಟಿ ರವಿ, ಸೋಮಣ್ಣ ಸೇರಿದ್ದಂತೆ ತುಂಬಾ ಜನ ಸೋತಿದ್ದಾರೆ. ನಾನು ಲೋಕಸಭೆಗೆ ಸ್ಪರ್ಧಿಯಲ್ಲ ಎಂದು ಶಾಸಕ ಸುರೇಶ್ ಗೌಡ ಹೇಳಿದರು.