Sunday, January 12, 2025

ಜುಲೈ – ಸೆಪ್ಟೆಂಬರ್​ನಲ್ಲಿ IPL?

ಮಾರ್ಚ್​ 29ರಿಂದ ಆರಂಭವಾಗಬೇಕಿದ್ದ ಪ್ರತಿಷ್ಠಿತ ಇಂಡಿಯನ್​ ಪ್ರೀಮಿಯರ್ ಲೀಗ್​ ಕೊರೋನಾ ಕಾರಣದಿಂದ ಸದ್ಯ ಏಪ್ರಿಲ್​ 15ರವರೆಗೆ ಮುಂದೂಡಲ್ಪಟ್ಟಿದೆ. ಆದರೆ, ಕೊರೋನಾ ಆತಂಕ ಹೆಚ್ಚಿರೋ ಹಿನ್ನೆಲೆಯಲ್ಲಿ ಈ ಬಾರಿಯ ಟೂರ್ನಿ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಬಿಸಿಸಿಐ ಜುಲೈ – ಸೆಪ್ಟೆಂಬರ್ ನಡುವಿನಲ್ಲಿ ಟೂರ್ನಿ ಆಯೋಜಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಮಾರ್ಚ್​ 14ರಂದು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಐಪಿಎಲ್ ಆಯೋಜನೆ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದ್ದರೂ ಒಮ್ಮತದ ತೀರ್ಮಾನಕ್ಕೆ ಬಂದಿಲ್ಲ. ಆದರೆ, ಸದ್ಯದ ಕ್ರಿಕೆಟ್ ವಾರ್ಷಿಕ ವೇಳಾಪಟ್ಟಿ ಪ್ರಕಾರ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯದಲ್ಲಿ ಏಷ್ಯಾ ಕಪ್ ಟಿ20 ನಡೆಯಲಿದೆ. ಈ ಅಧಿಯಲ್ಲಿ ಕಡಿಮೆ ಟೂರ್ನಿಗಳಿರುವುದರಿಂದ 13ನೇ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES