Sunday, September 8, 2024

ಸಾಲಮನ್ನಾ ಮಾಡುವುದು ಸರಿಯಲ್ಲ : ಸಚಿವ ಕೆ.ಎನ್. ರಾಜಣ್ಣ

ಬೆಂಗಳೂರು : ಪ್ರತೀ ವರ್ಷ ಸಾಲಮನ್ನಾ ಮಾಡೋದು ಸರಿಯಲ್ಲ, ಸಾಧುವೂ ಅಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 540 ಕೋಟಿ ಸುಸ್ತಿ ಇದೆ. ಅಸಲಿ ಪಾವತಿ ಮಾಡಿದ್ರೆ ಬಡ್ಡಿ ಸಮೇತ ಮನ್ನಾ ಅಂತ ಹೇಳಿದ್ದಾರೆ. ಒಬ್ಬರಿಗೇ ಮನ್ನಾ ಮಾಡ್ಕೊಂಡು ಇರೋಕೆ ಆಗುತ್ತಾ? ಬೇರೆ ರೈತರು ಏನು ಪಾಪ ಮಾಡಿದ್ದಾರೆ ಎಂದು ತಿಳಿಸಿದರು.

ವಸೂಲಿ ಮಾಡಿಕೊಡೋರಿಗೆಲ್ಲಾ ಕ್ಯಾಬಿನೆಟ್ ದರ್ಜೆ ನೀಡಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು. ಮೊದಲೆಲ್ಲಾ ಜಾತ್ಯಾತೀತ ಅಂತ ಹೇಳ್ತಾ ಇದ್ದರು. ದೇವೇಗೌಡ್ರು ಏನು ಹೇಳಿದ್ರು? ಮೋದಿ ಪಿಎಂ ಅದ್ರೆ ದೇಶವನ್ನೇ ಬಿಟ್ಟು ಹೋಗ್ತೀನಿ ಅಂದಿದ್ರು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ತೀನಿ ಅಂದ್ರು. ಅವರು ಕಾಂಗ್ರೆಸ್, ಬಿಜೆಪಿ ಜೊತೆ ಸರ್ಕಾರ ಮಾಡಿದ್ರು, ಅವ್ರ ಅನುಭವದ ಮೇಲೆ ಹೇಳ್ತಾ ಇದ್ದಾರೆ ಎಂದು ಕುಟುಕಿದರು.

ಉಪ್ಪು ಹುಳಿ ಖಾರ ಏನೂ ಇಲ್ವಂತಾ?

ಉಪ್ಪು, ಹುಳಿ, ಖಾರ ಏನೂ ಇಲ್ವಂತಾ? ವಿಪಕ್ಷದವರು ಏನೂ ಅಂತ ಹೇಳ್ತಾರೋ ಅದು ಸರಿಯಾದ ಅಭಿಪ್ರಾಯ ಅಲ್ಲ. ಕಾಂತರಾಜು ವರದಿ ಇಲ್ವಾ ಅಲ್ಲಿ. ಅದು ಆಯೋಗದ ಅಧ್ಯಕ್ಷರು ಮಾಡಿದ್ದಾರೆ. ಮೊದಲು ಸರ್ಕಾರಕ್ಕೆ ಸಲ್ಲಿಕೆ ಆಗಲಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES