Sunday, December 22, 2024

ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೂ ಬೆಲೆ ಕೊಡುತ್ತೆ : ನಾರಾಯಣ ಭಾಂಡಗೆ

ಬಾಗಲಕೋಟೆ : ರಾಜ್ಯಸಭೆ ಬಿಜೆಪಿ ಟಿಕೆಟ್​ ನೀಡಿರುವುದಕ್ಕೆ ನಾರಾಯಣ ಕೃಷ್ಣಸಾ ಭಾಂಡಗೆ ಬಿಜೆಪಿ ಹೈಕಮಾಂಡ್​ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಪಕ್ಷದಲ್ಲಿ ಮಾತ್ರ ತಮ್ಮಂಥ ಸಾಮಾನ್ಯ ಕಾರ್ಯಕರ್ತರನ್ನ ಗುರುತಿಸಲು ಸಾಧ್ಯ ಎಂದು ಹೇಳಿದ್ದಾರೆ.

ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಆಶಯದಂತೆ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದ್ದಾರೆ. ಸಾಮಾನ್ಯ ಕಾರ್ಯಕರ್ತನಿಗೆ ಗುರುತಿಸಿ ರಾಜ್ಯಸಭಾ ಟಿಕೆಟ್ ನೀಡಿದ್ದು ಬಿಜೆಪಿಯಲ್ಲಿಯೇ ಸಾಧ್ಯ. ಬೇರೆ ಪಕ್ಷದಲ್ಲಿ ಇದನ್ನು ನಾವು ಅಪೇಕ್ಷೆ ಮಾಡಲೂ ಅಸಾಧ್ಯ ಎಂದು ತಿಳಿಸಿದ್ದಾರೆ.

ಕಳೆದ ಅನೇಕ ವರ್ಷಗಳಿಂದ ಗುರುತಿಸಿದ್ದನ್ನು ಪಕ್ಷ ಗುರುತಿಸಿದೆ. ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೂ ಬೆಲೆ ಕೊಡುತ್ತೆ ಅನ್ನೋದಕ್ಕೆ, ನನ್ನನ್ನು ರಾಜ್ಯಸಭಾ ನಿಯುಕ್ತಿ ಮಾಡಿರೋದು ಒಂದು ಉದಾಹರಣೆ. ನನಗೆ ಪಕ್ಷ ಹೆಚ್ಚು ಶಕ್ತಿ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರೂ ಸೇರಿ ಎಲ್ಲರನ್ನೂ ಅಭಿನಂದಿಸುತ್ತೇನೆ. ಸದಾ ಪಕ್ಷದ ಸಲುವಾಗಿ ನಿರಂತರವಾಗಿ ಕೆಲಸ ಮಾಡುತ್ತೇನೆ ಎಂದು ನಾರಾಯಣಸಾ ಭಾಂಡಗೆ ಹೇಳಿದ್ದಾರೆ.

RELATED ARTICLES

Related Articles

TRENDING ARTICLES