Thursday, December 19, 2024

ಕುಟುಂಬ ಸಮೇತ ಶ್ರೀಕಾಳಹಸ್ತೀಶ್ವರ ಸ್ವಾಮಿ ‘ದರ್ಶನ’ ಪಡೆದ ‘ಡಿ ಬಾಸ್’ : ಇಲ್ಲಿವೆ ಫೋಟೋಗಳು

ಬೆಂಗಳೂರು : ‘ಕಾಟೇರ’ ಸಿನಿಮಾ ಸಕ್ಸಸ್​ ಬೆನ್ನಲ್ಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರು ಕುಟುಂಬ ಸಮೇತ ದೇವರ ಮೊರೆ ಹೋಗಿದ್ದಾರೆ.

ಬೆಳಗ್ಗೆ ತಾನೇ ತಿರುಪಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದ ಡಿ ಬಾಸ್, ಬಳಿಕ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್​ ಅವರೊಂದಿಗೆ ಶ್ರೀಕಾಳಹಸ್ತೀಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಶ್ರೀಕಾಳಹಸ್ತಿ ಶಾಸಕ ಬಿಯ್ಯಪು ಮಧುಸೂಧನ್ ರೆಡ್ಡಿ ಅವರು, ದರ್ಶನ್​ ಅವರನ್ನು ದಕ್ಷಿಣ ಗೋಪುರದಲ್ಲಿ ಸ್ವಾಗತಿಸಿದರು. ದೇವರ ದರ್ಶನದ ನಂತರ ವೈದ್ಧಿಕರು ಆಶೀರ್ವಾದ ಮಾಡಿ, ತೀರ್ಥಪ್ರಸಾದವನ್ನು ನೀಡಿದರು.

ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರಿಗೆ ಶ್ರೀಕಾಳಹಸ್ತಿಯಲ್ಲಿ ಪ್ರಸಿದ್ಧ ಕಲಾಂಕಾರಿ ಸ್ಕಾರ್ಫ್ ಧರಿಸಿರುವ ಸ್ವಾಮಿಯ ಭಾವಚಿತ್ರ ಮತ್ತು ಪ್ರತಿಮೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ದೇವಸ್ತಾನದ ಅಧ್ಯಕ್ಷ ಅಂಜೂರು ತಾರಕ ಶ್ರೀನಿವಾಸುಲು, ಪಾಲಿಕೆ ಸದಸ್ಯರಾದ ಮುನ್ನಾ, ಜೈ ಶ್ಯಾಮ್, ನಂದಾ, ಸುಬ್ಬರಾಯುಲು, ಶ್ರೀವಾರಿ ಸುರೇಶ್ ಮತ್ತಿತರರು ಇದ್ದರು.

ಈ ಫೋಟೋಗಳನ್ನು ಶಾಸಕ ಬಿಯ್ಯಪು ಮಧುಸೂಧನ್ ರೆಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರಿಗೆ ಶ್ರೀಕಾಳಹಸ್ತೀಶ್ವರ ಸ್ವಾಮಿಯ ಭಾವಚಿತ್ರ ನೀಡಲಾಯಿತು.

ಶ್ರೀಕಾಳಹಸ್ತೀಶ್ವರ ಸ್ವಾಮಿ ದೇವಾಲಯದಲ್ಲಿ ಗೋವಿಗೆ ನಟ ದರ್ಶನ್ ಅವರು ಮೇವು ತಿನ್ನಿಸಿದರು.

ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್​ ಅವರೊಂದಿಗೆ ನಟ ದರ್ಶನ್ ಶ್ರೀಕಾಳಹಸ್ತೀಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ.

ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಶ್ರೀಕಾಳಹಸ್ತೀಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಶ್ರೀ ಕಾಳಹಸ್ತೀಶ್ವರ ಸ್ವಾಮಿ ದೇಗುಲದಲ್ಲಿ ನಟ ದರ್ಶನ್ ಅವರಿಗೆ ಹೂ ಮಾಲೆ ಹಾಕಿ ಆಶೀರ್ವದಿಸಲಾಯಿತು.

ಶ್ರೀಕಾಳಹಸ್ತೀಶ್ವರ ಸ್ವಾಮಿ ದೇಗುಲದಲ್ಲಿ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್​ ಕೆಲ ಕಾಲ ಪ್ರಾರ್ಥನೆ ಸಲ್ಲಿಸಿದರು.

ಶ್ರೀಕಾಳಹಸ್ತಿ ಶಾಸಕ ಬಿಯ್ಯಪು ಮಧುಸೂಧನ್ ರೆಡ್ಡಿ ಅವರು ದರ್ಶನ್​ ಅವರನ್ನು ಸ್ವಾಗತಿಸಿದರು.

RELATED ARTICLES

Related Articles

TRENDING ARTICLES