ದಾವಣಗೆರೆ : ದೇಶ ಇಬ್ಭಾಗ ಎನ್ನುವವರಿಗೆ ಗುಂಡಿಟ್ಟು ಕೊಲ್ಲಬೇಕು ಎಂಬ ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ.
ಈ ಕುರಿತು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಈಶ್ವರಪ್ಪ ಅವರ ಮೇಲೆ FIR ಆಗಿದೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪ್ರತಾಪ್ ರೆಡ್ಡಿ ರಾಜೀನಾಮೆ ನೀಡಿರುವ ವಿಚಾರವಾಗಿ ಮಾತನಾಡಿ, ಪ್ರತಾಪ್ ರೆಡ್ಡಿ ರಾಜೀನಾಮೆಯನ್ನ ಪರಮೇಶ್ವರ್ ಒಪ್ಪಿಕೊಂಡಿದ್ದಾರೆ. ಅವರು ವೈಯಕ್ತಿಕ ಕಾರಣದಿಂದ VRS ತೆಗೆದುಕೊಂಡಿದ್ದಾರೆ. ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಜಾರಿಕೊಂಡಿದ್ದಾರೆ.
ಸಚಿವ ಮುನಿಯಪ್ಪ ತಿಂಡಿಗೆ ಕರೆದಿದ್ದರು
ಹಿಂದುಳಿದ ಸಚಿವರು ಗುಪ್ತ ಸಭೆ ಮಾಡಿರೋ ವಿಚಾರವಾಗಿ ಮಾತನಾಡಿ, ಮುನಿಯಪ್ಪ ತಿಂಡಿಗೆ ಕರೆದಿದ್ದರು. ಎಲ್ಲರೂ ಸೇರಿದ ಮೇಲೆ ರಾಜಕೀಯ ಬಿಟ್ಟು ಬೇರೆ ಏನು ಚರ್ಚೆ ಆಗೋಕೆ ಸಾಧ್ಯ? ಮುಂದಿನ ಲೊಕಸಭಾ ಚುನಾವಣೆ ಯಾರಿಗೆ ಏನು ಜವಾಬ್ದಾರಿ ಕೊಟ್ಟಿದ್ದಾರೆ? ಯಾರು ಏನು ಕೆಲಸ ಮಾಡಬೇಕು? ಅಂತ ಚರ್ಚೆ ಮಾಡಿದ್ವಿ. ಸುರ್ಜೇವಾಲ ಬಗ್ಗೆ ಹೈಕಮಾಂಡ್ ಬಗ್ಗೆ ಯಾರ ಹೆಸರನ್ನು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡಬೇಕು
ಅಡ್ವಾಣಿಗೆ ಭಾರತ ರತ್ನ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್.ಕೆ. ಅಡ್ವಾಣಿ, ನರಸಿಂಹರಾಯರಿಗೆ ಭಾರತ ರತ್ನ ಕೊಡುವುದು ಸ್ವಾಗತ ಮಾಡ್ತೀವಿ. ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎನ್ನುವುದು ಪರ್ಮನೆಂಟ್ ಆಗ್ರಹ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.