Thursday, December 19, 2024

ಧ್ರುವ KD ಸೆಟ್​ಗೆ ದಚ್ಚು : D58ನಲ್ಲಿ ಸಂಜಯ್ ದತ್- ಡಿ ಬಾಸ್ ಜುಗಲ್ಬಂದಿ ಫಿಕ್ಸ್..?

ಬೆಂಗಳೂರು : ಬಾಲಿವುಡ್​ ನಟ ಸಂಜಯ್ ದತ್ ಅವರು ಡಿ ಬಾಸ್ ನಟ ದರ್ಶನ್ ಅವ​ರನ್ನ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ವಿಶೇಷ ಅಂದ್ರೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಕೆಡಿ ಚಿತ್ರದ ಸೆಟ್​ಗೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಇಬ್ಬರೂ ಸ್ಟಾರ್​ಗಳ ಅಭಿಮಾನಿಗಳ ಮಧ್ಯೆ ಸುಮ್ ಸುಮ್ನೆ ಫ್ಯಾನ್ಸ್​ ವಾರ್​ಗೆ ಕಿಚ್ಚು ಹೊತ್ತಿತ್ತು. ಅದೀಗ ಶಮನವಾಗೋ ಬೆಳವಣಿಗೆ ಎದ್ದು ಕಾಣ್ತಿದೆ.

  • ಧ್ರುವ KD ಸೆಟ್​​ನಲ್ಲಿ ದಚ್ಚು.. ಸಂಜುಬಾಬಾ ಮೀಟ್ಸ್ ಡಿಬಾಸ್
  • ದರ್ಶನ್- ಧ್ರುವ ಮಧ್ಯೆ ಏನಿಲ್ಲ.. DD ಫ್ಯಾನ್ಸ್​ ವಾರ್​ಗೆ ಬ್ರೇಕ್..?
  • D58ನಲ್ಲಿ ಸಂಜಯ್ ದತ್- ದಾಸ ದರ್ಶನ್ ಜುಗಲ್​ಬಂದಿ..!
  • ಪ್ರೇಮ್ಸ್​​ ಮೂಲಕ ಎಲ್ಲಾ ಸುಖಾಂತ್ಯ.. ಫ್ಯಾನ್ಸ್​ಗೆ ಬಿಗ್ ನ್ಯೂಸ್

‘ಕಾಟೇರ’ ಚಿತ್ರದ ಬಿಗ್ಗೆಸ್ಟ್ ಸಕ್ಸಸ್​​ನಿಂದ ಖುಷಿಯ ಅಲೆಯಲ್ಲಿರುವ ದರ್ಶನ್. ಮತ್ತೊಂದೆಡೆ ಮಾರ್ಟಿನ್ ಹಾಗೂ ಕೆಡಿ ಸಿನಿಮಾಗಳಿಂದ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರುತ್ತಿರುವ ಧ್ರುವ ಸರ್ಜಾ. ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ. ಒಬ್ಬರನ್ನ ಕಂಡ್ರೆ ಮತ್ತೊಬ್ಬರಿಗೆ ಆಗಲ್ಲ. ಇವರ ಅಭಿಮಾನಿಗಳ ಮಧ್ಯೆ ಫ್ಯಾನ್ಸ್ ವಾರ್ ನಡೀತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಈ ಎಲ್ಲಾ ಬೆಳವಣಿಗೆಗಳ ನಡುವೆ ನಿನ್ನೆ ಸ್ವತಃ ಡಿ ಬಾಸ್ ದರ್ಶನ್ ಅವರು ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಶೂಟಿಂಗ್ ಸೆಟ್​ಗೆ ಕಾಲಿಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಜೋಗಿ ಪ್ರೇಮ್ ಌಕ್ಷನ್ ಕಟ್ ಹೇಳುತ್ತಿರುವ ಕೆಡಿ ಚಿತ್ರೀಕರಣ ಸ್ಥಳಕ್ಕೆ ಭೇಟಿ ನೀಡಿರುವ ದರ್ಶನ್, ಇಡೀ ತಂಡದ ಕಾಲ ಕಳೆದಿದ್ದಾರೆ.

ದರ್ಶನ್-ಧ್ರುವ ಫೋಟೋ ಎಲ್ಲಿ?

ದರ್ಶನ್ ಹಾಗೂ ಧ್ರುವ ಒಟ್ಟಿಗೆ ಇರುವ ಫೋಟೋಸ್ ಇನ್ನೂ ಹೊರಬಂದಿಲ್ಲ. ಆದ್ರೆ, ಕೆಡಿ ಚಿತ್ರದಲ್ಲಿ ಬಣ್ಣ ಹಚ್ಚಿರುವ ನಟ ಸಂಜಯ್ ದತ್ ಹಾಗೂ ದರ್ಶನ್ ಫೋಟೋಸ್ ಎಲ್ಲೆಡೆ ವೈರಲ್ ಆಗ್ತಿವೆ. ಅದಕ್ಕೆ ಜೋಗಿ ಪ್ರೇಮ್, ರಕ್ಷಿತಾ, ಕೆವಿಎನ್​ನ ವೆಂಕಟ್ ನಾರಾಯಣ್, ಸುಪ್ರೀತ್ ಹೀಗೆ ಸಾಕಷ್ಟು ಮಂದಿ ಸಾಕ್ಷಿಯಾಗಿದ್ದು, ಈ ಕ್ಷಣ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.

ಡೆವಿಲ್ ಬಳಿಕ ಸೆಟ್ಟೇರಲಿದೆ D58

‘ಕಾಟೇರ’ ಬಳಿಕ ಡೆವಿಲ್ ಸಿನಿಮಾ ಮಾಡುತ್ತಿರುವ ದರ್ಶನ್, ಅದಾದ ಬಳಿಕ D58 ಸೆಟ್ಟೇರಲಿದೆ. ಈಗಾಗಲೇ ಡಿ58 ಸಿನಿಮಾನ ಜೋಗಿ ಪ್ರೇಮ್ ನಿರ್ದೇಶಿಸಿ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತೆ ಅನ್ನೋದು ಪಕ್ಕಾ ಆಗಿದೆ. ಹಾಗಾಗಿ ಇನ್ನೂ ಹೆಸರಿಡದ ದರ್ಶನ್​ರ 58ನೇ ಚಿತ್ರಕ್ಕೆ ಸಂಜಯ್ ದತ್ ಅವರೇ ವಿಲನ್ ಆಗ್ತಾರಾ? ಎಂಬ ನಿರೀಕ್ಷೆ ಹೆಚ್ಚಿದೆ.

RELATED ARTICLES

Related Articles

TRENDING ARTICLES