ಮೈಸೂರು : ರಾಜ್ಯದಲ್ಲಿ ಧ್ವಜ ದಂಗಲ್ ನಿಲ್ಲುವಂತೆ ಕಾಣುತ್ತಿಲ್ಲ. ಹನುಮ ಧ್ವಜ ಬೆನ್ನಲ್ಲೇ ಹಸಿರು ಧ್ವಜ ಹಾಗೂ ಟಿಪ್ಪು ಧ್ವಜ ಹಾರಾಡಿತ್ತು. ಇದೀಗ, ಮತ್ತೆ ಮೈಸೂರಿನಲ್ಲಿ ಹಸಿರು ಧ್ವಜ ಹಾರಿಸಲಾಗಿದೆ.
ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಹಸಿರು ಬಾವುಟ ಹಾರಾಟ ಪ್ರಕರಣ ಮಾಸುವ ಬೆನ್ನಲ್ಲೇ ಮೈಸೂರಿನಲ್ಲಿ ಟಿಪ್ಪು ಹಾಗೂ ಹಸಿರು ಬಾವುಟ ರಾರಾಜಿಸಿವೆ.
ಮೈಸೂರಿನ ಕೈಲಾಸಪುರಂನ 4ನೇ ಮುಖ್ಯರಸ್ತೆಯ ಅಂಬೇಡ್ಕರ್ ಪಾರ್ಕ್ ಸಮೀಪದ ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿ ಪಕ್ಕದಲ್ಲೇ ಹಸಿರು ಧ್ವಜ ಹಾರಾಡುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದ್ದಾರೆ. ‘ಮೈಸೂರು ಜಿಲ್ಲಾಡಳಿತಕ್ಕೆ ಧನ್ಯವಾದಗಳು. ಆದರೆ, ಒಂದು ಬಾವುಟ ತೆಗೆದು ಪಕ್ಕದಲ್ಲೇ ಇನ್ನೊಂದನ್ನೇಕೆ ಬಿಟ್ಟಿದ್ದೀರಿ..? ನಾನೇ ಸ್ಥಳಕ್ಕೆ ಬಂದು ತೋರಿಸಬೇಕಾ..? ಕೈಲಾಸ್ ಪುರಂ, 4 ನೇ ಮುಖ್ಯರಸ್ತೆ, ಅಂಬೇಡ್ಕರ್ ಪಾರ್ಕ್, ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿ ಮತ್ತೊಂದು ಧ್ವಜವಿರುವುದು ಕಾಣುತ್ತಿಲ್ಲವೇ..?’ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಜಿಲ್ಲಾಡಳಿತಕ್ಕೆ ಧನ್ಯವಾದಗಳು, ಆದ್ರೆ ಒಂದು ಬಾವುಟ ತೆಗೆದು ಪಕ್ಕದಲ್ಲೇ ಇನ್ನೊಂದನ್ನೇಕೆ ಬಿಟ್ಟಿದ್ದೀರಿ? ನಾನೇ ಸ್ಥಳಕ್ಕೆ ಬಂದು ತೋರಿಸಬೇಕಾ? ಕೈಲಾಸ್ ಪುರಂ, 4 ನೇ ಮುಖ್ಯರಸ್ತೆ, ಅಂಬೇಡ್ಕರ್ ಪಾರ್ಕ್, ಶ್ರೀನಿವಾಸ ದೇವಸ್ಥಾನ ರಸ್ತೆಯಲ್ಲಿ ಮತ್ತೊಂದು ಧ್ವಜವಿರುವುದು ಕಾಣುತ್ತಿಲ್ಲವೇ? pic.twitter.com/mdzSPu3l5q
— Pratap Simha (@mepratap) January 31, 2024