ಮೈಸೂರು : ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಹಸಿರು ಬಾವುಟ ಹಾರಾಟ ಪ್ರಕರಣ ಮಾಸುವ ಬೆನ್ನಲ್ಲೇ ಮೈಸೂರಿನಲ್ಲಿ ಟಿಪ್ಪು ಬಾವುಟ ಹಾರಿಸಲಾಗಿದೆ.
ಮೈಸೂರಿನ ಕೈಲಾಸಪುರಂನ ಮೊಟ್ಟೆಕೇರಿ ಶ್ರೀನಿವಾಸ ಟೆಂಪಲ್ ರಸ್ತೆಯಲ್ಲಿರುವ ಅಂಬೇಡ್ಕರ್ ಪಾರ್ಕ್ನಲ್ಲಿ ಟಿಪ್ಪು ಬಾವುಟ ಹಾಕಲಾಗಿದೆ.
ಈ ಬಗ್ಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನ ಕೈಲಾಸಪುರಂನ ಮೊಟ್ಟೆಕೇರಿ ಶ್ರೀನಿವಾಸ ಟೆಂಪಲ್ ರೋಡ್ ನಲ್ಲಿರುವ ಅಂಬೇಡ್ಕರ್ ಪಾರ್ಕ್ ನಲ್ಲಿ ಟಿಪ್ಪು ಬಾವುಟ ಹಾಕಿದ್ದಾರೆ. ಅವರು ಯಾರ ಅನುಮತಿ ಪಡೆದಿದ್ದಾರೆ..? ಸಿಎಂ ಸಿದ್ದರಾಮಯ್ಯನವರೇ, ಪರಮೇಶ್ವರರೇ? ಉತ್ತರಿಸಿ ಎಂದು ಪ್ರಶ್ನೆ ಮಾಡಿದ್ದಾರೆ.
ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಹಸಿರು ಬಾವುಟ ಹಾರಾಟದ ವಿಡಿಯೋ ಟ್ವೀಟರ್ನಲ್ಲಿ ಹರಿದಾಡುತ್ತಿದ್ದಂತೆಯೇ ಹಿಂದೂ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಹಾರುತ್ತಿರುವ ಈ ಧ್ವಜ ಯಾವ ಧರ್ಮದ್ದು..? ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು. ಗಂಡಸರೇ ಆಗಿದ್ರೆ ಈ ಧ್ವಜ ತೆಗೆಸ್ರಿ ಎಂದು ನೆಟ್ಟಿಗರು ಕಮೆಂಟ್ ಹರಿಬಿಟ್ಟಿದ್ದರು.
ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಸ್ಥಳಕ್ಕೆ ತೆರಳಿ ಹಸಿರು ಬಾವುಟವನ್ನು ತೆರವುಗೊಳಿಸಿದ್ದಾರೆ. ಸ್ಥಳದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ಇದೀಗ ಮೈಸೂರಿನಲ್ಲಿ ಟಿಪ್ಪು ಬಾವುಟ ಹಾಕಲಾಗಿದೆ.
ಮೈಸೂರಿನ ಕೈಲಾಸಪುರಂನ ಮೊಟ್ಟೆಕೇರಿ ಶ್ರೀನಿವಾಸ ಟೆಂಪಲ್ ರೋಡ್ ನಲ್ಲಿರುವ ಅಂಬೇಡ್ಕರ್ ಪಾರ್ಕ್ ನಲ್ಲಿ ಟಿಪ್ಪು ಭಾವುಟ ಹಾಕಿದ್ದಾರಲ್ಲಾ ಅವರು ಯಾರ ಅನುಮತಿ ಪಡೆದಿದ್ದಾರೆ ಸಿದ್ದರಾಮಯ್ಯನವರೇ, ಪರಮೇಶ್ವರರೇ? pic.twitter.com/vpnIlbIlno
— Pratap Simha (@mepratap) January 30, 2024