ಬೆಂಗಳೂರು : ಮಿಸ್ಟರ್ ಕುಮಾರಸ್ವಾಮಿ ಅವರ ಪರನಾ..? ಹಾಗಿದ್ರೆ, ತಪ್ಪು ಯಾರದ್ದು..? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಪ್ಪು, ಬಿಜೆಪಿ ಅವರ ತಪ್ಪು ಅನ್ನೋದಕ್ಕಿಂತ ಮುಚ್ಚಿಳಿಕೆಯಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಇವರು ಹಾರಿಸಿದ್ದು ಭಾಗದ್ವಜ ಹಾಗಿದ್ರೆ ಅದು ಅಶಾಂತಿ ನಿರ್ಮಾಣ ಮಾಡಿದಂಗಲ್ವಾ..? ಇದನ್ನ ಕ್ರೀಯೇಟ್ ಮಾಡಿದವರು ಯಾರು? ಇದರ ಪರವಾಗಿ ಹೊದವರು ಯಾರು? ಈಗ ಯಾರು ತಪ್ಪು ಮಾಡಿದ್ದಾರೆ ಎಂದು ಕುಟುಕಿದ್ದಾರೆ.
ರಾಷ್ಟ್ರೀಯ ಧ್ಚಜನಾ..? ಕನ್ನಡ ಧ್ಚಜನಾ..?
ಪಂಚಾಯತಿ ಅವರು ಮುಚ್ಚಳಿಕೆ ಏನ್ ಬರೆದುಕೊಟ್ಟಿದ್ದಾರೆ ಗೊತ್ತಾ..? ಏನು ಕೊಟ್ಟಿದ್ದಾರೆ ಅಂದ್ರೆ ರಾಷ್ಟ್ರದ ಧ್ವಜ ಮತ್ತು ಕನ್ನಡ ಧ್ವಜ ಹಾರಿಸ್ತೀವಿ ಅಂತ. ಅದಕ್ಕೆ ಅವರು ಮುಚ್ಚಿಳಿಕೆ ಸಹ ಬರೆದುಕೊಟ್ಟಿದ್ದಾರೆ. ಯಾವುದೇ ಧರ್ಮದ ಯಾವುದೇ ಪಕ್ಷದ ಧ್ವಜ ಹಾರಿಸಬೇಡಿ. ಇವರು ಯಾವ ಧ್ವಜ ಹಾರಿಸಿದ್ರು. ರಾಷ್ಟ್ರೀಯ ಧ್ಚಜನಾ..? ಕನ್ನಡ ಧ್ಚಜನಾ..? ಎಂದು ಕಿಡಿಕಾರಿದ್ದಾರೆ.
ರಾಜಕೀಯ ಲಾಭ ಪಡೆಯುವ ದುರುದ್ದೇಶ
ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ಯಾವುದೇ ಧರ್ಮ ಜಾತಿ, ಪಕ್ಷದ ಧ್ವಜವನ್ನು ಹಾರಿಸುವುದಿಲ್ಲ ಎಂದು ಮುಚ್ಚಳಿಕೆ ಪತ್ರ ನೀಡಿ, ಅವರೇ ನಂತರ ಅದರ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದರಿಂದ ರಾಜಕೀಯ ಲಾಭ ಪಡೆಯುವ ದುರುದ್ದೇಶ ಇದ್ದು, ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.