ಕೊರೋನಾ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಅಂದಿನಿಂದ ಕೂಡ ನಡೆಯೋದು ಅನುಮಾನ. ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಐಪಿಎಲ್ ನಡೆಸದಂತೆ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಮನವಿ ಮಾಡಿವೆ ಎಂದು ತಿಳಿದುಬಂದಿದೆ.
ಕೊರೋನಾ ದೆಸೆಯಿಂದ 13ನೇ ಸೀಸನ್ ಐಪಿಎಲ್ ರದ್ದಾದಲ್ಲಿ ಬಿಸಿಸಿಐಗೆ ಸುಮಾರು 10 ಕೋಟಿ ರೂ ನಷ್ಟವಾಗಲಿದೆ ಎಂದು ತಿಳಿದುಬಂದಿದೆ. ಇನ್ನು ಐಪಿಎಲ್ ಮುಂದೂಡಲ್ಪಟ್ಟಿರುವ ಬಗ್ಗೆ ಪ್ರತಿಕಿಯಿಸಿರುವ ಬಿಸಿಸಿಐ ಅಧ್ಯಕ್ಷ ‘‘ಸುರಕ್ಷತೆಗೆ ಮೊದಲ ಆದ್ಯತೆ. ಸದ್ಯಕ್ಕೆ ಐಪಿಎಲ್ ಮುಂದೂಡಿಕೆಗೆ ಬದ್ಧರಾಗಿದ್ದೇವೆ. ಮುಂದೇನಾಗುತ್ತೆ ಕಾದುನೋಡೋಣ” ಎಂದಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಉಳಿದೆರಡು ಪಂದ್ಯಗಳು ಕೊರೋನಾದಿಂದ ರದ್ದಾಗಿವೆ.
IPL ನಡೆಯದಿದ್ರೆ ಬಿಸಿಸಿಐಗೆ 10 ಕೋಟಿ ರೂ ನಷ್ಟ..!
TRENDING ARTICLES