Friday, November 22, 2024

ಸಂವಿಧಾನ ರಚಿಸಿದವರಿಗೆ ಶ್ರೀರಾಮನೇ ಸ್ಫೂರ್ತಿ : ಪ್ರಧಾನಿ ಮೋದಿ

ನವದೆಹಲಿ : ಸಂವಿಧಾನ ರಚಿಸಿದವರಿಗೆ ಶ್ರೀರಾಮನೇ ಸ್ಫೂರ್ತಿಯ ಸೆಲೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಮನ್ ಕೀ ಬಾತ್’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ಕಾರ್ಯಕ್ರಮವು ಕೋಟ್ಯಂತರ ಜನರನ್ನು ಒಟ್ಟಿಗೆ ಸೇರಿಸಿತು. ಈ ವೇಳೆ ದೇಶದ ಒಟ್ಟಾರೆ ಸಾಮರ್ಥ್ಯ ಗೋಚರವಾಗಿದೆ ಎಂದು ತಿಳಿಸಿದರು.

ಜ.22ರಂದು ಅಯೋಧ್ಯೆಯಲ್ಲಿ ನಾನು ದೇವನಿಂದ ದೇಶ ಮತ್ತು ರಾಮನಿಂದ ರಾಷ್ಟ್ರ ಎಂದು ಹೇಳಿದ್ದೆ. ಪ್ರತಿಯೊಬ್ಬರ ಭಾವನೆ ಮತ್ತು ಭಕ್ತಿ ಒಂದೇ ಆಗಿತ್ತು. ಪ್ರತಿಯೊಬ್ಬರ ಮನದಲ್ಲಿ ರಾಮನಿದ್ದಾನೆ ಎಂದು ಹೇಳಿದರು.

ಪ್ರತಿಯೊಬ್ಬರೂ ರಾಮನ ಭಜನೆ ಮಾಡಿದರು

ಇಡೀ ದೇಶವೇ ಜ.22ರ ಸಂಜೆ ರಾಮ ಜ್ಯೋತಿಯನ್ನು ಬೆಳಗಿ, ದೀಪಾವಳಿಯನ್ನು ಆಚರಿಸಿತು. ಪ್ರತಿಯೊಬ್ಬರೂ ರಾಮನ ಭಜನೆ ಮಾಡಿ, ತಮ್ಮನ್ನು ರಾಮನಿಗೆ ಅರ್ಪಿಸಿಕೊಂಡರು. ಒಗ್ಗಟ್ಟಿನ ಶಕ್ತಿಯು ದೇಶವನ್ನು ಪ್ರಗತಿಯ ಹೊಸ ಉತ್ತುಂಗಕ್ಕೆ ಕೊಂಡೊಯ್ಯಲಿದೆ ಎಂದು ಅಭಿಪ್ರಾಯಪಟ್ಟರು.

ತಳಮಟ್ಟದಲ್ಲಿ ದುಡಿದವರಿಗೆ ಪದ್ಮ ಪುರಸ್ಕಾರ

ಕಳೆದೊಂದು ದಶಕದಲ್ಲಿ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡುವ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿದೆ. ಇದು ನನಗೆ ತುಂಬಾ ಖುಷಿ ಕೊಟ್ಟಿದೆ. ಎಲೆಮರೆ ಕಾಯಿಯಂತೆ ತಳಮಟ್ಟದಲ್ಲಿ ದುಡಿದವರು ಪದ್ಮ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಈ ಪುರಸ್ಕಾರವು ಜನರ ಪದ್ಮ ಪ್ರಶಸ್ತಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

RELATED ARTICLES

Related Articles

TRENDING ARTICLES