Sunday, November 24, 2024

7ನೇ ವಿಕೆಟ್ ಪತನ : ಸೋಲಿನ ಸುಳಿಗೆ ಸಿಲುಕಿದ ಭಾರತ

ಬೆಂಗಳೂರು : ಟಾಮ್ ಹಾರ್ಟ್ಲಿ ಸ್ಪಿನ್ ದಾಳಿಗೆ ನಲುಗಿದ ಭಾರತ ತಂಡ ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋಲಿನ ಸುಳಿಗೆ ಸಿಲುಕಿದೆ.

ಹೈದರಾಬಾದ್​ನ ಉಪ್ಪಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಈಗಾಲೇ 7 ವಿಕೆಟ್ ಕಳೆದುಕೊಂಡಿದ್ದು, ಗೆಲುವಿಗೆ 97 ರನ್​ ಗಳಿಸಬೇಕಿದೆ.

231 ರನ್​ಗಳ ಗುರಿ ಬೆನ್ನತ್ತಿರುವ ಭಾರತ 63 ರನ್​ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಬಳಿಕವೂ ವಿಕೆಟ್​ ಉರುಳಿದವು. 131 ರನ್​ಗಳಿಸುವಷ್ಟರಲ್ಲೇ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 15, ನಾಯಕ ರೋಹಿತ್ ಶರ್ಮಾ 39 ರನ್​ ಗಳಿಸಿದರು. ಭರವಸೆಯ ಆಟಗಾರ ಶುಭ್​ಮನ್ ಗಿಲ್ ಶೂನ್ಯಕ್ಕೆ ನಿರ್ಗಮಿಸಿ ಮತ್ತೆ ನಿರಾಸೆ ಮೂಡಿಸಿದರು.

4 ವಿಕೆಟ್ ಕಬಳಿಸಿದ ಟಾಮ್ ಹಾರ್ಟ್ಲಿ

ಬಳಿಕ ಬಂದ ಕೆ.ಎಲ್. ರಾಹುಲ್ 22, ಅಕ್ಸರ್ ಪಟೇಲ್ 17, ಶ್ರೇಯಸ್​ ಅಯ್ಯರ್ 13 ಹಾಗೂ ರವೀಂದ್ರ ಜಡೇಜಾ 2 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ಪರ ಸ್ಪಿನ್ನರ್ ಟಾಮ್ ಹಾರ್ಟ್ಲಿ ಪ್ರಮುಖ 4 ವಿಕೆಟ್ ಪಡೆದು ಭಾರತಕ್ಕೆ ದೊಡ್ಡ ಆಘಾತ ನೀಡಿದ್ದಾರೆ.

ಪ್ರಸ್ತುತ ಭಾರತ 7 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಿದ್ದು, ಇನ್ನೂ 97 ರನ್​ಗಳ ಅಗತ್ಯವಿದೆ. 8 ರನ್​ ಗಳಿಸಿರುವ ಶ್ರೀಕರ್ ಭರತ್ ಹಾಗೂ 7 ರನ್ ಗಳಿಸಿರುವ ರವಿಚಂದ್ರನ್ ಅಶ್ವಿನ್ ಕ್ರೀಸ್​ನಲ್ಲಿದ್ದಾರೆ.

RELATED ARTICLES

Related Articles

TRENDING ARTICLES