ಬೆಂಗಳೂರು : ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಪೊಲೀಸರು ಹನುಮಧ್ವಜ ತೆರವುಗೊಳಿಸಿರುವ ವಿಚಾರ ಸಂಬಂಧ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಾಏಕಿ ಪೊಲೀಸರ ಕರೆದುಕೊಂಡು ಹೋಗಿ, ಹನುಮಧ್ವಜ ತೆಗೆಯುವುದು ಏನಿತ್ತು? ರೆಸಲ್ಯೂಷನ್ ಏನಿತ್ತು..? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಘಟನೆ ರಾಮನ ಧ್ವಜಕ್ಕೆ ಮಾಡಿರೋ ಅಪಮಾನ. ಹನುಮನ, ರಾಮನ ವಿರುದ್ಧದ ದ್ವೇಷ ಕಾರಣ. ನಾನು ಮತ್ತು ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಸ್ಥಳಕ್ಕೆ ಭೇಟಿ ನೀಡಲಿದ್ದೇವೆ. ಈಗಾಗಲೇ ಸ್ಥಳೀಯರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇಂದೇ ಹೋರಾಟ ಮಾಡುತ್ತೇವೆ
ಈ ಅನ್ಯಾಯ ಖಂಡಿಸಿ, ಕಾಂಗ್ರೆಸ್ ವಿರೋಧಿ ನೀತಿ ವಿರೋಧಿಸಿ ಇಂದೇ ಹೋರಾಟ ಮಾಡುತ್ತೇವೆ. ಮಧ್ಯಾಹ್ನ ನಾವು ಅಲ್ಲಿಗೆ ತಲುಪುತ್ತೇವೆ. ಅಲ್ಲೇ ಹನುಮನ ಧ್ವಜ ಹಾರಾಟ ಆಗಬೇಕು ಎಂದು ಆರ್. ಅಶೋಕ್ ತಿಳಿಸಿದ್ದಾರೆ.
ಕೆರಗೋಡು ಗ್ರಾಮಕ್ಕೆ ಭೇಟಿ
ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಧ್ವಜ ದಂಗಲ್ ಜೋರಾಗಿದೆ. ಘಟನಾ ಸ್ಥಳಕ್ಕೆ ಈಗಾಗಲೇ ಬಿಜೆಪಿ ನಾಯಕರು ಆಗಮಿಸಿದ್ದಾರೆ. ಕೆರಗೋಡು ಗ್ರಾಮಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಭೇಟಿ ನೀಡಿದ್ದಾರೆ. ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಸ್ಥಳಕ್ಕೆ ಆಗಮಿಸಿದ್ದಾರೆ.