ಬೆಂಗಳೂರು : ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಕ್ರಮಣಕಾರಿ ಆಟವಾಡುತ್ತಿದ್ದಾರೆ.
ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಕೇವಲ 47 ಎಸೆತಗಳಲ್ಲೇ 7 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ಗಳೊಂದಿಗೆ ಅರ್ಧಶತಕ (50) ಪೂರೈಸಿದರು.
ಇಂಗ್ಲೆಂಡ್ ಪರ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ವೇಗಿ ಟಾಮ್ ಹಾರ್ಟ್ಲಿ ಎಸೆದ ಮೊದಲ ಓವರ್ನಲ್ಲೇ ಜೈಸ್ವಾಲ್ ಬೆಂಡೆತ್ತಿದರು. ಆ ಓವರ್ನಲ್ಲಿ ಎರಡು ಸಿಕ್ಸರ್ ಸಿಡಿಸಿ, ಘರ್ಜಿಸಿದರು. ಜೈಸ್ವಾಲ್ ಆರ್ಭಟಕ್ಕೆ ಹಾರ್ಟ್ಲಿ ಕೇವಲ 5 ಓವರ್ಗಳಲ್ಲಿ 44 ರನ್ ಬಿಟ್ಟುಕೊಟ್ಟಿದ್ದು ಗಮನಾರ್ಹ.
ನಿರಾಸೆ ಮೂಡಿಸಿದ ರೋಹಿತ್
ಜೈಸ್ವಾಲ್ ಹಾಗೂ ರೋಹಿತ್ ಜೋಡಿ ಮೊದಲ ವಿಕೆಟ್ಗೆ 80 ರನ್ಗಳ ಜೊತೆಯಾಟ ನೀಡಿತು. ಆದರೆ, ನಾಯಕ ರೋಹಿತ್ ಶರ್ಮಾ ನಿರಾಸೆ ಮೂಡಿಸಿದರು. 27 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 24 ರನ್ ಗಳಿಸಿ ಔಟಾದರು. ಆಕ್ರಮಣಕಾರಿಯಾಗಿ ಆಟವಾಡುತ್ತಿದ್ದ ಜೈಸ್ವಾಲ್ಗೆ ರೋಹಿತ್ ಸಾಥ್ ನೀಡಬೇಕಿತ್ತು.
ರೋಹಿತ್ ನಿರ್ಗಮನದ ಬಳಿಕ ಶುಭ್ಮನ್ ಗಿಲ್ ಕ್ರೀಸ್ಗೆ ಬಂದಿದ್ದಾರೆ. ಪ್ರಸ್ತುತ ಭಾರತ 23 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ ಅಜೇಯ 76* (3 ಸಿಕ್ಸರ್ ಹಾಗೂ 9 ಬೌಂಡರಿ) ಹಾಗೂ ಶುಭ್ಮನ್ ಗಿಲ್ ಅಜೇಯ 14* ರನ್ ಗಳಿಸಿ ಆಡುತ್ತಿದ್ದಾರೆ.
He has raced past FIFTY! 👏 👏
This has been a blitz of a knock from @ybj_19 to notch up his 2⃣nd Test half-century ⚡️ ⚡️
Follow the match ▶️ https://t.co/HGTxXf8b1E#TeamIndia | #INDvENG | @IDFCFIRSTBank pic.twitter.com/Pail01CRRw
— BCCI (@BCCI) January 25, 2024