ಅಯೋಧ್ಯೆ : ಶ್ರೀ ರಾಮ ಬೆಂಕಿಯಲ್ಲ, ಶ್ರೀ ರಾಮ ಶಕ್ತಿ. ಶ್ರೀ ರಾಮ ವಿವಾದ ಅಲ್ಲ, ರಾಮ ಸಮಾಧಾನ. ಶ್ರೀ ರಾಮ ವರ್ತಮಾನ ಅಲ್ಲ, ಅನಂತಕಾಲ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಬಳಿಕ ದೇಶವಾಸಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಅಯೋಧ್ಯೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಶ್ರೀ ರಾಮ ಪ್ರತಿಷ್ಠಾಪನೆಯಾಗಿದೆ ಎಂದರು.
ಪ್ರತಿ ಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ನಮ್ಮ ಜೀವನದ ರೀತಿ, ಅದು ನಿರಂತರವಾದದ್ದು. ರಾಮಮಂದಿರ ನಿರ್ಮಾಣ ಕೇವಲ ವಿಜಯ ಅಲ್ಲ, ವಿನಯದಿಂದ ಕೂಡಿದೆ. ಭಾರತದ ಆತ್ಮದ ಪ್ರತಿ ಕಣ ಕಣದಲ್ಲೂ ಶ್ರೀ ರಾಮ ಇದ್ದಾನೆ ಎಂದು ಹೇಳಿದರು.
ಭವ್ಯ ಭಾರತದ ಆಧಾರ ಪ್ರಭು ಶ್ರೀರಾಮ
ಶ್ರೀ ರಾಮ ಭಾರತದ ಚೇತನ ಅಷ್ಟೇ ಅಲ್ಲ, ಚಿಂತನ ಕೂಡ. ರಾಮ ವ್ಯಾಪಕ, ವಿಶ್ವ, ವಿಶ್ವಾತ್ಮ, ಪ್ರವಾಹ, ಪ್ರಭಾವ ಕೂಡ ಆಗಿದ್ದಾನೆ. ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣ ಆಗಿದೆ, ಈಗ ಮುಂದೆ ಏನು? ಕಾಲಚಕ್ರ ಬದಲಾಗುತ್ತಿದೆ. ಮುಂದಿನ ಪೀಳಿಗೆ ನಮ್ಮ ಕಾರ್ಯವನ್ನು ಸಾವಿರ ವರ್ಷ ಕಾಲ ನೆನಪು ಇಡುತ್ತವೆ. ದೇವನಿಂದ ದೇಶ, ರಾಮನಿಂದ ರಾಷ್ಟ್ರದ ಚೇತನ ವಿಸ್ತಾರಗೊಳ್ಳಬೇಕಿದೆ. ಭವ್ಯ ಭಾರತದ ಆಧಾರ ಪ್ರಭು ಶ್ರೀರಾಮ ಆಗುತ್ತಾನೆ ಎಂದು ಪ್ರಧಾನಿ ಮೋದಿ ಹೇಳಿದರು.