ವಿಜಯಪುರ : ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭರ್ಜರಿ ಆಫ್ ಘೋಷಣೆ ಮಾಡಿದ್ದಾರೆ.
ಜನವರಿ 22 ರವರೆಗೆ ವಿಜಯಪುರದ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಸಂಪೂರ್ಣ ಉಚಿತ ಹೆರಿಗೆ ಸೌಲಭ್ಯ ಕಲ್ಪಿಸಿರುವುದಾಗಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಯತ್ನಾಳ್, ಅಯೋಧ್ಯಾ ಸಂಭ್ರಮೋತ್ಸವ. ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಜನವರಿ 18 ರಿಂದ ಜನವರಿ 22 ರವರೆಗೆ ಹೆರಿಗೆ ಮಾಡಿಸಿಕೊಂಡರೆ, ಜನಿಸಿದ ಪ್ರತಿ ಮಗುವನ್ನು ರಾಮ ಹಾಗೂ ಸೀತೆಯ ಪ್ರತಿರೂಪವೆಂದು ಪರಿಗಣಿಸಿ ಹೆರಿಗೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಲಾಗುವುದು. ಜೈ ಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
ರಾಮಲಲ್ಲಾ ಪ್ರತಿಷ್ಠಾಪನೆ ವೇಳಾಪಟ್ಟಿ
- ಜನವರಿ 16 ರಂದು ಸರಯೂ ನದಿಯ ದಡದಲ್ಲಿ ‘ದಶವಿಧ’ ತೀರ್ಥ ಸ್ನಾನ
- ಜನವರಿ 17 ರಂದು ಬಾಲರಾಮನ ವಿಗ್ರಹವನ್ನು ಮೆರವಣಿಗೆ
- ಜನವರಿ 18 ರಂದು ಗಣೇಶ ಅಂಬಿಕಾ ಪೂಜೆ, ವರುಣನ ಪೂಜೆ, ಮಾತೃಕಾ ಪೂಜೆ, ಬ್ರಾಹ್ಮಣ ವರಣ, ವಾಸ್ತು ಪೂಜೆ
- ಜನವರಿ 19 ರಂದು ಅಗ್ನಿ ಸ್ಥಾಪನೆ, ನವಗ್ರಹ ಸ್ಥಾಪನೆ ಮತ್ತು ಹವನ
- ಜನವರಿ 20 ರಂದು ರಾಮಮಂದಿರದ ಗರ್ಭಗುಡಿ ಶುಚಿ
- ಜನವರಿ 21 ರಂದು ರಾಮನ ವಿಗ್ರಹಕ್ಕೆ 125 ಕಲಶಗಳೊಂದಿಗೆ ದೈವಿಕ ಸ್ನಾನ
- ಜನವರಿ 22 ರಂದು ವಿಗ್ರಹಕ್ಕೆ ಪೂಜೆ
“ಅಯೋಧ್ಯಾ ಸಂಭ್ರಮೋತ್ಸವ”
ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ದಿನಾಂಕ #18_ಜನವರಿ 2024 ರಿಂದ #22_ಜನವರಿ 2024 ವರೆಗೆ ಹೆರಿಗೆ ಮಾಡಿಸಿಕೊಂಡರೆ, ಜನಿಸಿದ ಪ್ರತಿ ಮಗುವನ್ನು ರಾಮ ಹಾಗೂ ಸೀತೆಯ ಪ್ರತಿರೂಪ ವೆಂದು ಪರಿಗಣಿಸಿ ಹೆರಿಗೆಯನ್ನು #ಸಂಪೂರ್ಣ_ಉಚಿತವಾಗಿ ನೆರವೇರಿಸಲಾಗುವುದು🚩🚩ಜೈ ಶ್ರೀರಾಮ್ pic.twitter.com/vpqaYoCIZH
— Basanagouda R Patil (Yatnal) (@BasanagoudaBJP) January 17, 2024